ಉಡುಪಿ: ದಿನಾಂಕ:27-12-2024(ಹಾಯ್ ಉಡುಪಿ ನ್ಯೂಸ್) ಕಾರು ಚಾಲಕನೋರ್ವ ದುಡುಕಿನ ಚಾಲನೆ ನಡೆಸಿ ಬೋಲೆರೋ ವಾಹನಕ್ಕೆ ಡಿಕ್ಕಿ ಹೊಡೆದುದಲ್ಲದೆ ಬೊಲೆರೋ ವಾಹನದ ಚಾಲಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪ್ರಮೋದ್ ಕುಮಾರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ನಿವಾಸಿ ಪ್ರಮೋದ್ ಕುಮಾರ್ (25) ಎಂಬವರು ಡೆಕೊರೇಷನ್ ಕೆಲಸವನ್ನು ಮಾಡಿಕೊಂಡಿದ್ದು,ಅವರ ಮಾಲಿಕತ್ವದ ಮಹೀಂದ್ರಾ ಬೊಲೆರೋ ಪಿಕ್ ಆಪ್ ವಾಹನ ನಂಬ್ರ KA16B2667 ರಲ್ಲಿ ದಿನಾಂಕ:25/12/2024 ರಂದು ಅವರ ಮಾವನ ಮಗ ಸುಮಂತ್ ಎಂಬವರೊಡನೆ ಕಿದಿಯೂರು ಹೋಟೆಲ್ ನಲ್ಲಿ ಡೆಕೋರೆಷನ್ ಕೆಲಸವಿದ್ದರಿಂದ ಸಂಜೆ 5:15 ಗಂಟೆಗೆ ಕಲ್ಸಂಕದಿಂದ ಕಡಿಯಾಳಿ ಕಡೆಗೆ ಎಡ ಬದಿಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಕೆಂಪು ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ನ ಚಾಲಕ ಶಾರುಖ್ ಖಾನ್ (31) ಎಂಬವ ಪ್ರಮೋದ್ ಕುಮಾರ್ ರವರ ವಾಹನವನ್ನು ರಾಂಗ್ ಸೈಡ್ ನಿಂದ ಓವರ್ ಟೇಕ್ ಮಾಡಲು ಪ್ರಯತ್ನಿಸಿ ಅವಸರದ ಚಾಲನೆ ಮಾಡಿದ್ದರಿಂದ ಆತನ ಕಾರು ಬೊಲೆರೋ ವಾಹನದ ಹಿಂದಕ್ಕೆ ತಾಗಿದ್ದರಿಂದ ಆತನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬಂಪರ್ ಗೆ ಹಾನಿಯಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೂಡಲೇ ಪ್ರಮೋದ್ ಕುಮಾರ್ ಅವರು ಅವರ ವಾಹನವನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದು, ಮಾರುತಿ ಸುಜುಕಿ ಕಾರಿನವರು ಸ್ಪಲ್ಪ ಮುಂದೆ ನಿಲ್ಲಿಸಿದಾಗ ಕಾರಿನ ನಂಬ್ರವನ್ನು ನೋಡಿದಾಗ ಅದರ ನಂಬ್ರ KA20MA4342 ಆಗಿದ್ದು, ಆ ಕಾರಿನಿಂದ ಯಾರೋ ಓರ್ವ ವ್ಯಕ್ತಿಯು ಕೂಡಲೇ ಇಳಿದು ಪ್ರಮೋದ್ ಕುಮಾರ್ ರವರ ಬಳಿ ಬಂದು ನಿನಗೆ ಸರಿಯಾಗಿ ನೋಡಿಕೊಂಡು ವಾಹನವನ್ನು ಚಲಾಯಿಸಲು ಆಗುದಿಲ್ಲವ, ನಿನಗೆ ಲೈಸೆನ್ಸ್ ಕೊಟ್ಟವರು ಯಾರು ? ಕಾರಿನ ರಿಪೇರಿ ಹಣವನ್ನು ಕೊಡು ಎಂದು ಕೇಳಿದಾಗ ಪ್ರಮೋದ್ ಕುಮಾರ್ ರವರು ಸುಮ್ಮನಿದ್ದು ಆಗ ಆರೋಪಿ ಶಾರುಖ್ ಖಾನ್ ನು ನಾನು ಯಾರೆಂದು ತೋರಿಸುತ್ತೇನೆ ಎಂದು ಹೇಳಿ ತನ್ನ ಕಾರಿನ ಬಳಿ ಹೋಗಿ ಯಾವುದೋ ಒಂದು ವಸ್ತುವನ್ನು ಕೈಯಲ್ಲಿ ಹಿಡಿದು ಈಗ ಮಾತನಾಡು ಎಂದು ಕೈಯಲ್ಲಿ ಹಿಡಿದಿದ್ದ ವಸ್ತುವಿನಿಂದ ಬಲಕೆನ್ನೆಗೆ ಹೊಡೆದಿದ್ದು,ನಂತರ ಪ್ರಮೋದ್ ಕುಮಾರ್ ರವರ ವಾಹನದ ಮುಂಭಾಗದ ಗ್ಲಾಸ್, ಬೋನೆಟ್ ಮತ್ತು ಲೈಟ್ ಗಳನ್ನು ಹೊಡೆದು ಪುಡಿ ಮಾಡಿ ಬಳಿಕ ಪ್ರಮೋದ್ ಕುಮಾರ್ ವರ ಬಳಿ ಪುನಃ ಬಂದು ಕೈಯಿಂದ ಕೆನ್ನೆಗೆ ಬಲವಾಗಿ ಹೊಡೆದ ಕಾರಣ ಪ್ರಮೋದ್ ಕುಮಾರ್ ಮೂರ್ಛೆ ಹೋಗಿದ್ದು ಅವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕವಾಗಿ ರೌಡಿಸಂ ಪ್ರದರ್ಶಿಸಿದ ವ್ಯಕ್ತಿಯು ತನ್ನನ್ನು ಯಾರು ಎಂದು ಗೊತ್ತುಂಟ ನಾನು ಟಿಎಮ್ ಟಿ ಬಸ್ ನ ಚಾಲಕ ಎಂದು ಹೇಳುತ್ತಾ ಹಲ್ಲೆ ನಡೆಸಿದ್ದಾನೆ ಎಂದು ಪ್ರಮೋದ್ ಕುಮಾರ್ ದೂರಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 115(2) 118(1) 352 324(4) ಬಿಎನ್ಎಸ್ ರಂತೆ ಪ್ರಕರಣ ದಾಖಲಾಗಿದೆ.