Spread the love

ಮಣಿಪಾಲ: ದಿನಾಂಕ:27-12-2024( ಹಾಯ್ ಉಡುಪಿ ನ್ಯೂಸ್)  ಮಣಿಪಾಲ ಪೊಲೀಸ್‌ ಠಾಣೆಯ ಸಿಬ್ಬಂದಿಗಳಾದ ಮಂಜುನಾಥ ಹಾಗೂ ಅಣ್ಣಪ್ಪ ರವರು  ದಿನಾಂಕ:23-12-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಣಿಪಾಲ ಠಾಣಾ ವ್ಯಾಪ್ತಿಯ ಕಾಯಿನ್ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಸಾತ್ವಿಕ (21) ಚಾಂತಾರು ಬ್ರಹ್ಮಾವರ ಎಂಬವನು ಅಮಲಿನಲ್ಲಿದ್ದು, ಆತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಆತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಆತನನ್ನು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ದಿನಾಂಕ: 26/12/2024 ರಂದು ಆರೋಪಿಯು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಬಗ್ಗೆ ಮಣಿಪಾಲ ಕೆ ಎಂ ಸಿ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  : ಕಲಂ 27 (b) NDPS ACT ರಂತೆ ಪ್ರಕರಣ ದಾಖಲಾಗಿದೆ.

error: No Copying!