ದಿನಾಂಕ: 20-12-2024(ಹಾಯ್ ಉಡುಪಿ ನ್ಯೂಸ್)
ಡಾಕ್ಟರ್ ಬಿ.ಆರ್ ಅಂಬೇಡ್ಕರ್ ವಿರೋಧಿ ಅಮಿತ್ ಶಾ ಮತ್ತು ಕಾಂಗ್ರೆಸ್ ಪಕ್ಷದ ವಿರೋಧಿ ನರೇಂದ್ರ ಮೋದಿ ಇಬ್ಬರೂ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಮುಖಂಡ ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹಿಸಿದ್ದಾರೆ .
ಕೇಂದ್ರದ ಸಚಿವರಾದಂತಹ ಶ್ರೀ ಅಮಿತ್ ಶಾ ರವರು ಡಾಕ್ಟರ್ ಅಂಬೇಡ್ಕರ್ ಅವರ ಬಗ್ಗೆ ತುಂಬಾ ಕೀಳಾಗಿ ಮಾತನಾಡಿರುತ್ತಾರೆ. ಡಾಕ್ಟರ್ ಅಂಬೇಡ್ಕರ್ ಅವರು ನಮ್ಮ ಭಾರತ ದೇಶಕ್ಕೆ ಸಂವಿಧಾನವನ್ನು ನೀಡಿದಂತಹ ಮಹಾನ್ ನಾಯಕ.ಅಂತವರ ಬಗ್ಗೆ ಅವರನ್ನು ಹೆಸರು ಹೇಳಬಾರದೆಂದು ಒಂದು ರೀತಿಯಲ್ಲಿ ಸಂಸತ್ತಿನಲ್ಲಿ ಅವರು ಹೇಳಿಕೆ ನೀಡಿದ್ದು ನಮ್ಮ ಭಾರತ ದೇಶದ ಸಂವಿಧಾನಕ್ಕೆ ಒಂದು ಅವಮಾನ ಮಾಡಿದಂತೆ.ಇಂಥವರು ನಮ್ಮ ಕೇಂದ್ರದ ಸಚಿವರಾಗಿರುವುದು ನಮ್ಮ ದೇಶದ ಜನಸಾಮಾನ್ಯರ ದುರಾದೃಷ್ಟ.
ಅವರ ಹೇಳಿಕೆ ಸಮರ್ಥಿಸಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಹೇಳಿಕೆಯನ್ನು ನೀಡಿ ಜನಸಾಮಾನ್ಯರನ್ನು ಮೋಸಗೊಳಿಸುತ್ತಿರುವ ಮಾನ್ಯ ನರೇಂದ್ರ ಮೋದಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಮಾತನಾಡಲಿ .ಭಾರತ ದೇಶದ ಪ್ರಧಾನಿಯಾಗಿ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಿರುವುದು ಆ ಸ್ಥಾನಕ್ಕೆ ತಕ್ಕದ್ದಲ್ಲ.ಎಂಬುದನ್ನು ಮೋದಿ ಅವರು ಪ್ರಧಾನಿಯಾಗಿ ಅರಿತುಕೊಳ್ಳಬೇಕಾಗಿದೆ.ಅನಗತ್ಯವಾಗಿ ಬಿಜೆಪಿಯ ನಾಯಕರುಗಳು ತಾವೇ?ನಾಟಕವಾಡಿ ರಾಹುಲ್ ಗಾಂಧಿಯನ್ನು ಸಂಸತ್ ನಲ್ಲಿ ತಳ್ಳಿ ಅವರ ವಿರುದ್ಧವೇ ಕೇಸು ದಾಖಲಿಸಲು ಹೊರಟಿರುವ ಬಿಜೆಪಿ ನಾಯಕರ ಷಡ್ಯಂತ್ರ ಬಯಲಾಗಿದೆ. ಈ ಎಲ್ಲಾ ಕಾರಣಗಳಿಗೂ ಸನ್ಮಾನ್ಯ ಮೋದಿ ಹಾಗೂ ಅಮಿತ್ ಶಾ ಇವರುಗಳೇ ಕಾರಣ .?ಇಂಥ ಕೆಟ್ಟ ಹೇಳಿಕೆಗಳನ್ನು ನೀಡಿ ಜನಸಾಮಾನ್ಯರನ್ನು ಮೋಸಗೊಳಿಸುವ ಬದಲು ನಿಮ್ಮ ಸ್ಥಾನಕ್ಕೆ ನೀವೇ ರಾಜೀನಾಮೆ ನೀಡಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಅವರು ಆಗ್ರಹಿಸಿರುತ್ತಾರೆ