Spread the love

ಮಲ್ಪೆ: ದಿನಾಂಕ 19/12/2024 (ಹಾಯ್ ಉಡುಪಿ ನ್ಯೂಸ್) ಕೊಡವೂರು ಗ್ರಾಮದ ಸುಜೀತ್ ಎಂಬವರ ಮೆಹೆಂದಿ ಕಾರ್ಯಕ್ರಮದಲ್ಲಿ  ತಡ ರಾತ್ರಿ ವರೆಗೆ ಡಿಜೆ ಸೌಂಡ್ ಬಳಸಿರುವ ಬಗ್ಗೆ ಸಾರ್ವಜನಿಕ ದೂರು ಬಂದ ಕಾರಣ ಮಲ್ಪೆ ಪೊಲೀಸ್‌ ಠಾಣೆಯ ಎಎಸ್‌ಐ ವಿಜಯ್ ಕೆ ಅವರು ದಾಳಿ ನಡೆಸಿ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡಿದ್ದಾರೆ.

ಮಲ್ಪೆ ಪೊಲೀಸ್‌ ಠಾಣೆಯ ಎಎಸ್ಐ ಯವರಾದ ವಿಜಯ್ ಕೆ ಅವರು ದಿನಾಂಕ :18-12-2024 ರಂದು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ರಾತ್ರಿ 11:00 ಗಂಟೆಗೆ ಉಡುಪಿ ಪೊಲೀಸ್ ಕಂಟ್ರೋಲ್‌ ರೂಂ ನಿಂದ ವೈರ್‌ ಲೆಸ್‌ ಮಾಹಿತಿ ಬಂದಂತೆ ಕೊಡವೂರು ಗ್ರಾಮದ ಸುಜೀತ್‌ ಮತ್ತು ಸಂಜನಾ ರವರ ಮೆಹಂದಿ ಕಾರ್ಯಕ್ರಮ ಊರು ರೆಸಾರ್ಟ್‌ ನಲ್ಲಿ ನಡೆಯುತ್ತಿದ್ದು ಮೆಹಂದಿ ಧ್ವನಿವರ್ಧಕ, ಡಿಜೆ ಇತ್ಯಾದಿಗಳನ್ನು ಬಳಸಿ ರಾತ್ರಿ 11:30 ಗಂಟೆಯ ಸಮಯದಲ್ಲಿ ಅತೀ ಕರ್ಕಶವಾದ ಸೌಂಡ್‌ ಹಾಕಿರುತ್ತಾರೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.

ಈ ಬಗ್ಗೆ ಸುಜಿತ್‌ ರವರಲ್ಲಿ  ಫೊಲೀಸರು ಅನುಮತಿ ಪಡೆಯಲಾಗಿದೆಯೆ ಎಂದು ವಿಚಾರಣೆ ನಡೆಸಿದಾಗ ಪೂರ್ವಾನುಮತಿ ಮತ್ತು ಪರವಾನಿಗೆಯನ್ನು ಪಡೆದುಕೊಂಡಿರುವುದಿಲ್ಲವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಹಾಗೂ ಧ್ವನಿ ವರ್ದಕದ ಬಗ್ಗೆ ವಿಚಾರಿಸಿದಾಗ ಸೌಂಡ್‌ ಸಿಸ್ಟಂ ಪ್ರಕಾಶ್‌ ಅಂಬಲಪಾಡಿ ಎಂಬವರದ್ದೆಂದು ತಿಳಿಸಿರುತ್ತಾರೆ ಎಂದು ದೂರಿದ್ದಾರೆ. ಹಾಗೂ ಆಪಾದಿತರು ಯಾವುದೇ ಪರವಾನಿಗೆ ಇಲ್ಲದೆ ತಡರಾತ್ರಿವರೆಗೆ ದ್ವನಿವರ್ಧಕವನ್ನು ಅತೀಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿಯಲ್ಲಿ ಬಳಸಿದ್ದು, SOUND BOX, MOUTH PIECE ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಉಪದ್ರವವನ್ನುಂಟುಮಾಡಿ ತೊಂದರೆಯಾಗುವ ರೀತಿಯಲ್ಲಿ ಸ್ಪೀಕರ್‌ ಬಳಸಿದ ಅಪಾದಿತರಾದ ಸೌಂಡ್‌ ಸಿಸ್ಟಂ ಅಂಬಲಪಾಡಿ ಇದರ ಮಾಲಕ ಪ್ರಕಾಶ್ ಮತ್ತು ಊರು ರೆಸಾರ್ಟ್‌ ನ ಮಾಲಿಕರ ವಿರುದ್ದ ಮಲ್ಪೆ ಪೊಲೀಸ್‌ ಠಾಣೆಯಲ್ಲಿ  ಕಲಂ:292 BNS 109 KP Act ರಂತೆ ಪ್ರಕರಣ ದಾಖಲಾಗಿದೆ.

error: No Copying!