Spread the love

ಉಡುಪಿ: ದಿನಾಂಕ:08-12-2024(ಹಾಯ್ ಉಡುಪಿ ನ್ಯೂಸ್) ನ್ಯಾಯಾಲಯದಲ್ಲಿ ಅಪರಾಧ ಪ್ರಕರಣ ವೊಂದರಲ್ಲಿ ವಿಚಾರಣಾಧೀನ ಆರೋಪಿಗಳಿಗೆ ಜಾಮೀನು ನೀಡಲು ಬಂದ ಈರ್ವರು ವ್ಯಕ್ತಿಗಳು ನಕಲಿ ಆಧಾರ್ ಕಾರ್ಡನ್ನು ನ್ಯಾಯಾಲಯಕ್ಕೆ ನೀಡಿ ಫೋರ್ಜರಿ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾ ನ್ಯಾಯಾಲಯದ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಬ್ಬಾಸ್ ಎಸ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಬ್ಬಾಸ್ ಎಸ್ ಎಂಬವರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು,ಅವರ ವ್ಯಾಪ್ತಿಗೆ ಬರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1, ರಲ್ಲಿ ಕೊಲ್ಲೂರು ಪೊಲೀಸ್‌ ಠಾಣೆಯ ಅಪರಾಧ ಕ್ರಮಾಂಕ  57/2024 ರ ದೋಷರೋಪಣಾ ಪಟ್ಟಿಯನ್ನು ಅಂಗೀಕರಿಸಿ ಸ್ಪೇಷಲ್‌ ಕೇಸ್‌ ನಂಬ್ರ 100/2024 ರಲ್ಲಿ ಪ್ರಸ್ತುತ ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣದಲ್ಲಿ  ದಿನಾಂಕ:07/12/2024 ರಂದು ವಿಚಾರಣೆಯ ಸಮಯ ಇಬ್ರಾಹಿಂ ಎಂ ಐ ಮತ್ತು ಎ ಕೆ ಹಮೀದ್‌ ಎಂಬವರು ನ್ಯಾಯಾಲಯದಲ್ಲಿ  ಹಾಜರಾಗಿ ಸ್ಪೇಷಲ್‌ ಕೇಸ್‌ ನಂಬ್ರ 100/2024 ಪ್ರಕರಣದಲ್ಲಿನ  ಆರೋಪಿಗಳ  ಪರ ಜಾಮೀನು ನೀಡಲು ಆಧಾರ್‌ ಕಾರ್ಡನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ ಎನ್ನಲಾಗಿದೆ.

ಆದರೆ ಇವರುಗಳು ಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಹಾಜರು ಪಡಿಸಿದ್ದ ಆಧಾರ್‌ ಕಾರ್ಡುಗಳನ್ನು ಹಾಗೂ ಈ ದಿನ  ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಆಧಾರ್‌ ಕಾರ್ಡುಗಳನ್ನು ಪರಿಶೀಲಿಸಿದಾಗ ಸಾಮ್ಯತೆ ಇಲ್ಲದೇ ಇರುವುದು ಕಂಡು ಬಂದಿದೆ ಎನ್ನಲಾಗಿದೆ,ಹಾಗೂ  ನ್ಯಾಯಾಲಯಕ್ಕೆ ಮೋಸ ಮಾಡುವ ದುರುದ್ದೇಶದಿಂದ ಆಧಾರ್ ಕಾರ್ಡುಗಳನ್ನು ಫೋರ್ಜರಿ ಮಾಡಿದ್ದಾರೆ ಎಂದು ಅಬ್ಬಾಸ್ ಎಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ  ಉಡುಪಿ  ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(2),336(2),336(3),340(2) r/w 3(5) BNS ರಂತೆ ಪ್ರಕರಣ ದಾಖಲಾಗಿದೆ

error: No Copying!