ಕೋಟ: ದಿನಾಂಕ:08-12-2024 (ಹಾಯ್ ಉಡುಪಿ ನ್ಯೂಸ್) ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಪೀಟ್ ಜುಗಾರಿ ಅಡ್ಡೆಗೆ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ಅವರು ದಿನಾಂಕ:07-12-2024 ರಂದು ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಠಾಣೆಯ ವ್ಯಾಪ್ತಿಗೆ ಬರುವ ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿರುವ ಜಯಪ್ರಕಾಶ ಎಂಬುವವರ ಮನೆಯ ಮುಂದಿನ ತೋಟದಲ್ಲಿರುವ ತೆರೆದ ಶೆಡ್ ನಲ್ಲಿ ಗುಂಪು ಸೇರಿ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಸಾರ್ವಜನಿಕ ರಿಂದ ಮಾಹಿತಿ ಬಂದಿದೆ ಎನ್ನಲಾಗಿದೆ.
ಮಾಹಿತಿ ಬಂದ ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ಧಾಳಿ ನಡೆಸಿದಾಗ ಅಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದವರ ಪೈಕಿ 1) ಜಯಪ್ರಕಾಶ್ 2) ಗಣೇಶ್ ಎಂಬುವವರನ್ನು ಪೊಲೀಸರು ಹಿಡಿದಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ನೋಡಿ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1)ಸಂತೋಷ, 2)ವಿಶ್ವನಾಥ- 3)ಕೊಟ್ರೇಶ್ 4)ನಾಗರಾಜ 5) ರಾಘು 6) ಬೆನಕ ರಾಜು 7)ಸುಧೀರ್ ಎಂಬುವವರು ಒಟ್ಟು 7 ಜನರು ಕತ್ತಲೆಯಲ್ಲಿ ಓಡಿ ಹೋಗಿರುತ್ತಾರೆ ಎನ್ನಲಾಗಿದೆ.
ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ಪ್ಲಾಸ್ಟಿಕ್ ಟೇಬಲ್ -01, ಪ್ಲಾಸ್ಟಿಕ್ ಕುರ್ಚಿ-05, ಬೆಡ್ ಶೀಟ್-01, ನಗದು ರೂ. 5,800/- ಮತ್ತು ಹಾಗೂ 159 ಇಸ್ಪೀಟು ಎಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ: 112 BNS & 87 KP ACT ರಂತೆ ಪ್ರಕರಣ ದಾಖಲಾಗಿದೆ.