ಉಡುಪಿ: ದಿನಾಂಕ:08-12-2024(ಹಾಯ್ ಉಡುಪಿ ನ್ಯೂಸ್) ಯಾರೋ ಅಪರಿಚಿತರು ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ನಡೆಸಿದ್ದಾರೆ ಎಂದು ಮಜರ್ ಅಹಮ್ಮದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು ನಿವಾಸಿ ಮಜರ್ ಅಹಮ್ಮದ್ (36) ಎಂಬವರು ಉಡುಪಿಯಲ್ಲಿ ಕಳೆದ 6 ವರ್ಷಗಳಿಂದ ವಾಸಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಜರ್ ಅಹಮ್ಮದ್ ಅವರು ಉಡುಪಿ ನಗರದ ಪರಿವಾರ್ ಸ್ವೀಟ್ಸ್ ಅಂಗಡಿಯ ಬಳಿ ಕಾಟನ್ ಪೀಪಲ್ ಎಂಬ ಬಟ್ಟೆ ಅಂಗಡಿ ವ್ಯಾಪಾರವನ್ನು ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ದಿನಾಂಕ:17/11/2024 ರಂದು ಮಜರ್ ಅಹಮ್ಮದ್ ರವರು ಅಂಗಡಿಯಲ್ಲಿ ವ್ಯಾಪಾರವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಯಾರೋ ಅಪರಿಚಿತ ಆರೋಪಿಯು ಮಜರ್ ಅಹಮ್ಮದ್ ರವರ ಮೊಬೈಲ ನ್ನು ಯಾವುದೋ ಸಾಫ್ಟ್ ವೇರ್ ನಿಂದ ಹ್ಯಾಕ್ ಮಾಡಿ, ಮಜರ್ ಅಹಮ್ಮದ್ ರವರ ಬ್ಯಾಂಕ್ ಖಾತೆ ನಂಬ್ರ ಕ್ಕೆ ಲಿಂಕ್ ಇದ್ದ ಮೊಬೈಲ್ ನಂಬ್ರ ಗೆ ಒಟಿಪಿಗಳು ಬರುವಂತೆ ಮಾಡಿ ಅವುಗಳನ್ನು ಪಡೆದು ಮಜರ್ ಅಹಮ್ಮದ್ ರ ಖಾತೆಯಿಂದ ಒಟ್ಟು 249500/- ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮಜರ್ ಅಹಮ್ಮದ್ ರವರಿಗೆ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 318(2) ಬಿಎನ್‌ಎಸ್, 66(D) IT ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.