Spread the love

ಉಡುಪಿ: ದಿನಾಂಕ:08-12-2024(ಹಾಯ್ ಉಡುಪಿ ನ್ಯೂಸ್) ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾದ ರಾಮಚಂದ್ರ ಅವರು ಬಂಧಿಸಿದ್ದಾರೆ.

ದಿನಾಂಕ: 07/12/2024 ರಂದು ಉಡುಪಿ ನಗರದ, ಸಿಟಿ ಬಸ್‌ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಯುವಕನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ  ಪೊಲೀಸ್ ನಿರೀಕ್ಷಕರಾದ ರಾಮಚಂದ್ರ  ಅವರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .

ಆತನನ್ನು ಮೆಡಿಕಲ್ ತಪಾಸಣೆ ಗೊಳಪಡಿಸಿದ್ದು ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು, ಉಡುಪಿ ಇಲ್ಲಿಂದ ಬಂದಿರುವ ತಜ್ಞರ ವರದಿಯಲ್ಲಿ ಆರೋಪಿ ವರುಣ್‌(20) ನೀರೆ ಅಂಚೆ ಈತನು ಗಾಂಜಾ ಸೇವನೆ ಮಾಡಿರುವುದು ಧೃಢ ಪಟ್ಟಿರುತ್ತದೆ ಎನ್ನಲಾಗಿದೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!