ಉಡುಪಿ: ದಿನಾಂಕ:08-12-2024 (ಹಾಯ್ ಉಡುಪಿ ನ್ಯೂಸ್) ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ಹೆಸರಿನಲ್ಲಿ ಯಾರೋ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಅವರ ವೈಯಕ್ತಿಕ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಹೆಬ್ರಿ ಚಾರ ನಿವಾಸಿ ಸುರಭ್ (24) ಎಂಬವರ ಪಕ್ಷದ ನಾಯಕರಾದ, ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಎಂಬುವವರ ಹೆಸರಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು Vinay Kumar Sorake ಎಂಬ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ನಕಲಿ ಫೇಸ್ ಬುಕ್ ಖಾತೆಯ ಫ್ರೋಫೈಲ್ ಗೆ ಶ್ರೀ ವಿನಯ ಕುಮಾರ್ ಸೊರಕೆ ರವರ ಫೋಟೋವನ್ನು ದುರ್ಬಳಕೆ ಮಾಡಿ, ಅವರ ವೈಯಕ್ತಿಕ ಗೌರವಕ್ಕೆ ದಕ್ಕೆ ಉಂಟು ಮಾಡುವ ಉದ್ದೇಶದಿಂದ ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದಿರುತ್ತಾರೆ ಎಂದು ಸುರಭ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66 (ಸಿ) 66 (ಡಿ) ಐ.ಟಿ. ಆಕ್ಟ್. ರಂತೆ ಪ್ರಕರಣ ದಾಖಲಾಗಿದೆ.