ಕಾರ್ಕಳ: ದಿನಾಂಕ:04-12-2024 ( ಹಾಯ್ ಉಡುಪಿ ನ್ಯೂಸ್) ರೆಂಜಾಳ ಗ್ರಾಮದ ನಿವಾಸಿ ಮೈಮೂನಾ ಎಂಬವರಿಗೆ ಗಂಡನ ಮನೆಯವರು ನೀಡಿದ ಮಾನಸಿಕ ಹಿಂಸೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿ ಅವರ ಅಕ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ , ರೆಂಜಾಳ ಗ್ರಾಮದ ನಿವಾಸಿ ರಶೀದಾ ಬಾನು (31) ಎಂಬವರ ತಂಗಿ ಮೈಮುನಾಳನ್ನು ಕಾರ್ಕಳ ಕಸಬಾ ಗ್ರಾಮದ ಜೋಡುರಸ್ತೆಯ ನೂರ್‌ಜಾನ್ ಮಂಜಿಲ್ ಎಂಬಲ್ಲಿ ವಾಸವಾಗಿರುವ ಮಹಮ್ಮದ್ ರಿಜ್ವಾನ್ ಎಂಬುವವನೊಂದಿಗೆ ರೆಂಜಾಳದ ಮಸೀದಿಯಲ್ಲಿ ದಿನಾಂಕ :16/08/2017 ರಂದು ಮದುವೆ ಮಾಡಿಕೊಟ್ಟಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೈಮೂನಾಳು ತನ್ನ ಗಂಡ ಮಹಮ್ಮದ್ ರಿಜ್ವಾನ್, ಮಾವ ಮೊಹಮ್ಮದ್ ಶರೀಫ್, ಅತ್ತೆ ನೂರ್‌ಜಾನ್ ಎಂಬವವರೊಂದಿಗೆ ವಾಸ ಮಾಡಿಕೊಂಡಿದ್ದು ಮದುವೆಯಾದ ನಂತರ ಮೈಮೂನಾಳಿಗೆ ಅವಳ ಅತ್ತೆ ನೂರ್‌ಜಾನ್ ಮತ್ತು ಮಾವ ಮೊಹಮ್ಮದ್ ಶರೀಪ್ ಪ್ರತೀ ದಿನ ಜಗಳ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದೂ, ತನ್ನ ಗಂಡನ ಮನೆಯವರು ಹಿಂಸೆಯನ್ನು ನೀಡಿ, ಮನೆ ಬಿಟ್ಟು ಹೋಗು ಎಂದು ಹೇಳುತ್ತಿರುವುದಾಗಿ ರಶೀದಾ ಬಾನು ಅವರಿಗೆ ಪೋನ್ ಮಾಡಿ ಮೈಮೂನ ತಿಳಿಸುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಶೀದಾ ಬಾನು ರವರು ವಾಸವಾಗಿರುವ ಬಂಗ್ಲೆಗುಡ್ಡೆಯಲ್ಲಿರುವ ಬಾಡಿಗೆ ಮನೆಗೆ ಮತ್ತು ರೆಂಜಾಳದಲ್ಲಿರುವ ತಾಯಿ ಮನೆಗೆ ಮೈಮೂನಾಳು ಬಂದಾಗ ಗಂಡನ ಮನೆಯವರು ಮತ್ತು ಸಂಬಂಧಿಕರು ಕಿರುಕುಳ ನೀಡುತ್ತಿರುವ ಬಗ್ಗೆ ಮನೆಯವರಲ್ಲಿ ತಿಳಿಸಿದ್ದಳು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
4 ವರ್ಷಗಳ ಹಿಂದೆ ಅವಳ ಅತ್ತೆಯ ಅಣ್ಣನಾದ ಅಬ್ದುಲ್ ಖಾದರ್, ಮಜೀದ್, ಸಿರಾಜ್‌ನ ಹೆಂಡತಿ ರಫಾತ್ ಮೈಮೂನಾಳಿಗೆ ಚೂರಿ ಹಾಕಿ ಸಾಯಿಸಿ ಜೈಲಿಗೆ ಹೋಗಿ ಬರುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ಪೋನ್‌ನಲ್ಲಿ ಮೈಮೂನ ತಿಳಿಸಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 28/11/2024ರಂದು ಮಧ್ಯಾಹ್ನ 12:00 ಗಂಟೆ ಮೈಮೂನಾಳು ರಶೀದಾ ಬಾನುರಿಗೆ ಪೋನ್ ಮಾಡಿ, ಅತ್ತೆಯ ಅಕ್ಕ ಮೆಹರುನ್ನಿಸಾ ಮತ್ತು ಅವರ ಮಗಳಾದ ದಿಲ್‌ಷಾದ್ ರವರು ತನಗೆ ಎಲ್ಲರೂ ಒಟ್ಟಿಗೆ ಸೇರಿ ಗಲಾಟೆ ಮಾಡಿದ್ದು ರಶೀದಾ ಬಾನು ರವರ ತಂಗಿಯು ಬೇರೆ ಬಾಡಿಗೆ ಮನೆ ಮಾಡಿ ವಾಸವಾಗಿದ್ದು ಪತಿಯ ಮನೆಯವರು ಪತಿಗೆ ಹೆದರಿಸಿ ಬೆದರಿಸಿ ಬಾಡಿಗೆ ಮನೆಗೆ ಹೋಗದಂತೆ ಮಾಡಿರುವುದಾಗಿ, ಹಾಗೂ ಮೈಮೂನಾಳು ವಾಸವಿದ್ದ ಬಾಡಿಗೆ ಮನೆಗೆ ಪತಿಯು ಬಾರದೇ ಇದ್ದ ಕಾರಣ, ಅವರನ್ನು ಬಾಡಿಗೆ ಮನೆಗೆ ಕರೆದುಕೊಂಡು ಬರುತ್ತೇನೆಂದು ಅತ್ತೆಯ ಮನೆಗೆ ಹೋಗಿ ಅತ್ತೆಯ ಮನೆಯಲ್ಲಿ ರಾತ್ರಿ 8:00 ಗಂಟೆಗೆ ಇಲಿ ಪಾಷಾಣ ವನ್ನು ತೆಗೆದುಕೊಂಡಿದ್ದು ಆಸ್ವಸ್ಥಳಾದ ಮೈಮೂನಾಳನ್ನು ಅವಳ ಪತಿ ಸಿಟಿ ಆಸ್ಪತ್ರೆ ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆ ಮಂಗಳೂರಿಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಆಕೆಯನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ನೀಡಿದ್ದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ದಿನಾಂಕ 30/11/2024ರಂದು ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿದ್ದು ಮೈಮೂನಾರವರು ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 02/12/2024ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರಶೀದಾ ಬಾನು ರವರ ತಂಗಿ ಮೃತ ಮೈಮೂನಾಳಿಗೆ ಅವಳ ಅತ್ತೆ ನೂರ್‌ಜಾನ್, ಮಾವ ಮೊಹಮ್ಮದ್ ಶರೀಪ್,ಸಿರಾಜ್, ಸಿರಾಜ್‌ನ ಹೆಂಡತಿ ರಫಾತ್, ಅಬ್ದುಲ್ ಖಾದರ್, ಮಜೀದ್, ಮೆಹರುನ್ನಿಸಾ ಮತ್ತು ದಿಲ್‌ಷಾದ್ ರವರುಗಳು ಮಾನಸಿಕ ಹಿಂಸೆ ನೀಡಿ, ಸಾಯಲು ದುಷ್ಪೇರಣೆ ನೀಡಿದ ಕಾರಣದಿಂದ ಮೈಮುನಾಳು ಬದುಕುವ ದಾರಿ ಕಾಣದೆ ವಿಷವನ್ನು ಸೇವಿಸುವಂತೆ ಪ್ರಚೋದನೆ ನೀಡಿ ಸಾಯಲು ಕಾರಣರಾಗಿದ್ದಾರೆ ಎಂದು ಪೊಲೀಸರಿಗೆ ರಶೀದಾ ಬಾನು ದೂರನ್ನು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 86, 108, 351 ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಾಗಿದೆ