ಕುಂದಾಪುರ: ದಿನಾಂಕ: 28-11-2024 (ಹಾಯ್ ಉಡುಪಿ ನ್ಯೂಸ್) ಬಳ್ಕೂರು ಗ್ರಾಮದ ಮಹಿಳೆ ಶ್ರುತಿ ಎಂಬವರಿಗೆ ಅವರ ಗಂಡ ಹಾಗೂ ಗಂಡನೊಂದಿಗೆ ಸೇರಿಕೊಂಡು ತವರು ಮನೆಯವರು ಬೆದರಿಕೆ ಹಾಕಿದ್ದಾರೆ ಎಂದು ಪೋಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ಬಳ್ಕೂರು ಗ್ರಾಮದ ನಿವಾಸಿ ಶ್ರುತಿ (33) ಎಂಬವರು ರಾಘವೇಂದ್ರ ಎಂಬುವವರನ್ನು ಮದುವೆಯಾಗಿದ್ದು ತಮಗೆ 3 ವರ್ಷದ ಹೆಣ್ಣು ಮಗು ಇದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶ್ರುತಿ ರವರ ಗಂಡನು ಗಲಾಟೆ ಮಾಡಿ ಸರಿಯಾಗಿ ನೋಡಿಕೊಳ್ಳದ ಕಾರಣ ಶ್ರುತಿ ರವರು 5 ವರ್ಷಗಳಿಂದ ತನ್ನ ತವರು ಮನೆಗೆ ಬಂದು ಉಳಿದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತವರು ಮನೆಯಲ್ಲಿ ಸಹ ತಂದೆ, ತಾಯಿ ಅಣ್ಣಂದಿರು ಶ್ರುತಿ ರವರನ್ನು ಮನೆಯಿಂದ ಹೊರ ಹಾಕುವ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಮನೆಯಿಂದ ಹೊರ ಹೋಗುವಂತೆ ಕೈಯಿಂದ ಹೊಡೆದು ಹಿಂಸಿಸುತ್ತಿದ್ದು ಆದರೂ ಸಹ ಶ್ರುತಿ ರವರು ತವರು ಮನೆಯಲ್ಲಿಯೇ ಇದ್ದರು ಎಂದಿದ್ದಾರೆ .
ಎರಡು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಹೊರಗಡೆ ಹೋಗಿದ್ದು ಮನೆಗೆ ಬಂದಾಗ ಎಲ್ಲರೂ ಬೈದಿರುತ್ತಾರೆ ಎಂದು ದೂರಿದ್ದಾರೆ.ಅದೇ ವಿಚಾರದಲ್ಲಿ ದಿನಾಂಕ 27/11/2024 ರಂದು ಮದ್ಯಾಹ್ನ ಶ್ರುತಿ ರವರಿಗೆ ಅವರ ಮನೆಯಲ್ಲಿ ತಂದೆ, ತಾಯಿ ಹಾಗೂ ಅಣ್ಣಂದಿರಾದ ರವಿ, ಶಶಿಕಾಂತ ಎಂಬವರು ನೀನು ಎಲ್ಲಿಗೆ ಹೋಗಿದ್ದೆ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಶ್ರುತಿ ರವರ ತಾಯಿ ಸುಶೀಲರವರು ಶ್ರುತಿ ರವರ ಬಲ ಕೈ ರಟ್ಟೆಗೆ ಕಚ್ಚಿ ನೋವುಂಟು ಮಾಡಿದ್ದಲ್ಲದೆ, ತಂದೆ ಮತ್ತು ಅಣ್ಣನವರು ಕೈಯಿಂದ ಹೊಡೆದಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇವರೆಲ್ಲರಿಗೂ ಶ್ರುತಿ ರವರ ಗಂಡನಾದ ರಾಘವೇಂದ್ರ ಸಹಕಾರ ನೀಡುತ್ತಾ ಬಂದಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶ್ರುತಿ ರವರು ಇವರ ವಿರುದ್ಧ ದೂರು ನೀಡಲು ಹೊರಟಾಗ ಅಡ್ಡಗಟ್ಟಿ ತಡೆದು ನಿಲ್ಲಿಸಿ ಕಂಪ್ಲೆಂಟ್ ಕೊಟ್ಟರೆ ನಿನಗೆ ಮನೆಗೆ ಸೇರಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರುತಿ ರವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ :126(2),115(2) 352,351(2), 54,3(5) BNS ರಂತೆ ಪ್ರಕರಣ ದಾಖಲಾಗಿದೆ.