Spread the love

ಉಡುಪಿ: ದಿನಾಂಕ:29-11-2024 (ಹಾಯ್ ಉಡುಪಿ ನ್ಯೂಸ್) ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2024ರ ಸಮಾರೋಪ ಸಮಾರಂಭ ಅಜ್ಜರ ಕಾಡು ಕ್ರೀಡಾಂಗಣದಲ್ಲಿ ನಡೆಯಿತು ಮುಖ್ಯ ಅತಿಥಿಗಳಾಗಿ, ಶ್ರೀ ಅಮಿತ್ ಸಿಂಗ್ ಐಪಿಎಸ್ ಪೊಲೀಸ್ ಉಪ ಮಹಾನಿರೀಕ್ಷಕರು ಪಶ್ಚಿಮ ವಲಯ ಮಂಗಳೂರು ,ಶ್ರೀ ಪ್ರತೀಕ್ ಬಾಯಲ್ ಐಎಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್, ಶ್ರೀ ಜಿತೇಂದ್ರ ಕುಮಾರ್ ದಯಾಮ ಐಪಿಎಸ್ ಪೊಲೀಸ್ ಅಧೀಕ್ಷಕರು ನಕ್ಸಲ್ ನಿಗ್ರಹ ಪಡೆ ಕಾರ್ಕಳ, ಶ್ರೀ ಮಿಥುನ್ ಹೆಚ್ ಎನ್ ಐಪಿಎಸ್ ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪಡೆ  ಇವರು ಆಗಮಿಸಿದ್ದರು

ಉಡುಪಿ ಪೊಲೀಸ್  ಅಧೀಕ್ಷಕರಾದ ಡಾ ಅರುಣ್ ಕೆ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -1ಎಸ್ ಟಿ ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಪರಮೇಶ್ವರ್ ಹೆಗಡೆ ಅವರು ಉಪಸ್ಥಿತರಿದ್ದರು.ವಿಜೇತ ಸ್ಪರ್ಧಾಳುಗಳಿಗೆ ಬಹುಮಾನವನ್ನು ವಿತರಿಸಲಾಯಿತು .

error: No Copying!