ಹೆಬ್ರಿ: ದಿನಾಂಕ: 08-11-2024 (ಹಾಯ್ ಉಡುಪಿ ನ್ಯೂಸ್) KYC ಅಪ್ಲೋಡ್ ಎಂದು ಎಸ್ಸೆಮ್ಮೆಸ್ ಕಳುಹಿಸಿ ವ್ಯಕ್ತಿಯೋರ್ವರಿಗೆ 51908ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆಬ್ರಿ ನಿವಾಸಿ ಶೇಖರ (77) ಎಂಬವರ ಮೊಬೈಲ್ ಗೆ KYC ಅಪ್‌ಲೋಡ್ ಎಂದು ಎಸ್‌ಎಮ್‌ಎಸ್ ಬಂದಿದ್ದು ದಿನಾಂಕ 07/11/2024 ರಂದು ಅವರು SMS ನಲ್ಲಿದ್ದ ನಂಬ್ರಕ್ಕೆ ಕಾಲ್ ಮಾಡಿದಾಗ ಕೆನರಾ ಬ್ಯಾಂಕ್‌ನವರು ಎಂದು ಹೇಳಿ ನಿಮ್ಮ KYC ಅಪ್‌ಡೇಟ್ ಆಗದೆ ಇದ್ದು ಅಕೌಂಟ್ ಬ್ಲಾಕ್ ಮಾಡುವುದಾಗಿ ಹೇಳಿ, ಶೇಖರರವರ ಅಕೌಂಟ್ ನಂಬ್ರ ಹೆಸರು ವಿಳಾಸ ಹಾಗೂ ಎಟಿಎಮ್ ಕಾರ್ಡ್‌ನ ಕೊನೆಯ ನಾಲ್ಕು ನಂಬ್ರ ತೆಗೆದುಕೊಂಡು ಮಾಹಿತಿ ಅಪ್‌ಲೋಡ್ ಆದ ನಂತರ ಓಟಿಪಿ ಬರುವುದಾಗಿ ತಿಳಿಸಿ ನಂತರ ಸ್ವಲ್ಪ ಸಮಯದಲ್ಲಿ ಕರೆ ಮಾಡಿ ಓಟಿಪಿ ಕೇಳಿ ಪಡೆದುಕೊಂಡಿದ್ದು ಅಲ್ಲದೆ 15 ನಿಮಿಷಗಳ ನಂತರ ಕರೆ ಮಾಡಿ ಕನ್ನಡ ಬಾಷೆಯಲ್ಲಿ ಮಹಿಳೆ ಮಾತನಾಡಿ ಕೆನರಾ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿ ನಿಮ್ಮ ಅಕೌಂಟ್‌ನಿಂದ 51,908/- ರೂಪಾಯಿ ಹಣ ಕಟ್ಟಾಗಿರುವುದಾಗಿ ನೀವು 1930 ಕರೆ ಮಾಡುವಂತೆ ತಿಳಿಸಿದ್ದು ಶೇಖರರವರು ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ 51908/- ರೂ ಡ್ರಾ ಆಗಿದ್ದು ಯಾರೋ ಅಪರಿಚಿತ ವ್ಯಕ್ತಿ ಮೋಸ ಮಾಡಿ ಅಕ್ರಮವಾಗಿ ಹಣ ಡ್ರಾ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 318(4), 319(2), BNS 66(C), 66(D) IT ACT ರಂತೆ ಪ್ರಕರಣ ದಾಖಲಾಗಿದೆ.