ಬ್ರಹ್ಮಾವರ: ದಿನಾಂಕ 26.10.2024 (ಹಾಯ್ ಉಡುಪಿ ನ್ಯೂಸ್) ಹೇರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪು ಕಲ್ಲು ಕಳ್ಳ ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಧು ಬಿ.ಇ, ಅವರು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಧು ಬಿ.ಇ ಅವರು ದಿನಾಂಕ :25-10-2024 ರಂದು ಉಡುಪಿಯಲ್ಲಿ ಕರ್ತವ್ಯ ಮುಗಿಸಿಕೊಂಡು ಠಾಣೆಗೆ ಬರುತ್ತಾ 52 ನೇ ಹೇರೂರು ಗ್ರಾಮದ, ಸುಫ್ರೀಂ ಫೀಡ್ಸ್ ಬಳಿ ತಲುಪುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಆರೋಪಿಗಳಾದ ಶಿವಣ್ಣ ಎಂಬವನು KL11P9632 ನೇ ಟಿಪ್ಪರ್ ಲಾರಿಯಲ್ಲಿ ಹಾಗೂ ಬಸವ್ ರಾಜ್ ತುಬಾಕಿ ಎಂಬವನು KA20A1181 ನೇ ಟಿಪ್ಪರ್ ಲಾರಿಗಳಲ್ಲಿ ಕೆಂಪು ಕಲ್ಲು ಸಾಗಾಟ ಮಾಡಿಕೊಂಡು ಬರುತ್ತಿರುವುದನ್ನು ನೋಡಿ ಆ ಲಾರಿಗಳನ್ನು ನಿಲ್ಲಿಸಿ ಆರೋಪಿತರಲ್ಲಿ ವಿಚಾರಣೆ ನಡೆಸಿದ್ದಾರೆ.
ಆರೋಪಿಗಳು ಕೆಂಪು ಕಲ್ಲು ಸಾಗಾಟ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಹೊಂದಿರುವುದಿಲ್ಲ ಎಂಬ ಬಗ್ಗೆ ಪೊಲೀಸ್ ತನಿಖೆ ಯಲ್ಲಿ ತಿಳಿದು ಬಂದಿರುತ್ತದೆ ಎನ್ನಲಾಗಿದೆ.
ಆರೋಪಿಗಳು ಯಾವುದೇ ಪರವಾನಿಗೆ ಹೊಂದದೇ ಕದ್ದು ಕೆಂಪುಗಳನ್ನು ಸಾಗಾಟ ಮಾಡಿದ್ದಾರೆಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 4(1-a), 21(4) MMDR Act ಹಾಗೂ ಕಲಂ: 303(2) BNS ನಂತೆ ಪ್ರಕರಣ ದಾಖಲಾಗಿದೆ.