Spread the love

ದಿನಾಂಕ: 27-10-2024(ಹಾಯ್ ಉಡುಪಿ ನ್ಯೂಸ್) ನಕಲಿ ಫೇಸ್ ಬುಕ್ ಖಾತೆಗಳಲ್ಲಿ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕ ಟಿ.ಪಿ.ಮಂಜುನಾಥ ಎಂಬವರ ಹೆಸರನ್ನು ಬಳಸಿಕೊಂಡು ಅವರ ಗೌರವಕ್ಕೆ ಧಕ್ಕೆ ತರುತ್ತಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಟಿ.ಪಿ.ಮಂಜುನಾಥ ಅವರು ದೂರು ದಾಖಲಿಸಿದ್ದಾರೆ.

ಕುಂದಾಪುರ ನಿವಾಸಿ ಟಿ.ಪಿ.ಮಂಜುನಾಥರವರು ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕರಾಗಿದ್ದು ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣದ ಫೇಸ್ ಬುಕ್ಕಿನಲ್ಲಿ ಆಕಾಶವಾಣಿ ನಾಡ ಸಂಪಾದಕ ಹಾಗೂ ಆಕಾಶವಾಣಿ ನಾಡ ಎಂಬ ಎರಡು ನಕಲಿ ಪೇಜ್ ಗಳನ್ನು ಯಾರೋ ಕಿಡಿಗೇಡಿಗಳು ಸ್ರಷ್ಟಿಸಿ ಅದರಲ್ಲಿ ಸಮಾಜದ ಕೆಲವು ಗಣ್ಯ ವ್ಯಕ್ತಿಗಳ ಹಾಗೂ ಕೆಲವರ ವಿರುದ್ಧ ಅವರ ಗೌರವಕ್ಕೆ ಧಕ್ಕೆ ಬರುವಂತೆ ಬರಹಗಳನ್ನು ಬರೆದು ಅದರಲ್ಲಿ ಟಿ.ಪಿ.ಮಂಜುನಾಥರವರ ಹೆಸರನ್ನು ಬಳಸಿ ಅವರ ಗೌರವಕ್ಕೆ ಕುಂದು ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ನಕಲಿ ಫೇಸ್ಬುಕ್ ಪೇಜ್ ಗಳಲ್ಲಿ ಬರೆಯುವ ಬರಹಗಳನ್ನು ಟಿ.ಪಿ.ಮಂಜುನಾಥರೆ ಬರೆದಿರುವಂತೆ ಅವರ ಹೆಸರನ್ನು ಬಳಸಿಕೊಳ್ಳಲಾಗಿದೆ ಹಾಗೂ ಟಿ.ಪಿ.ಮಂಜುನಾಥರವರ ಫೋಟೋ ವನ್ನು ಬಳಸಿಕೊಂಡು ಬರಹಗಳೆಲ್ಲ ಟಿ.ಪಿ ಮಂಜುನಾಥ ರೇ ಬರೆದಿರುವಂತೆ ಸಾಮಾಜಿಕ ಜಾಲ ತಾಣದ ಫೇಸ್ ಬುಕ್ ಖಾತೆಯಲ್ಲಿ  ಬಿಂಬಿಸಲಾಗಿದೆ ಎಂದೂ ಈ ನಕಲಿ ಫೇಸ್ಬುಕ್ ಖಾತೆಗಳಿಂದಾಗಿ ತನ್ನ ಗೌರವ ಕ್ಕೆ ಕುಂದು ಉಂಟಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!