Spread the love

ಬೈಂದೂರು: ದಿನಾಂಕ 22/10/2024 (ಹಾಯ್ ಉಡುಪಿ ನ್ಯೂಸ್) ಉಪ್ರಳ್ಳಿ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬೈಂದೂರು ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ರವರು ದಾಳಿ ನಡೆಸಿ ಹನ್ನೊಂದು ಜನರನ್ನು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರಿಗೆ ದಿನಾಂಕ: 21-10-2024 ರಂದು ಉಳ್ಳೂರು 11ನೇ ಗ್ರಾಮದ ಉಪ್ರಳ್ಳಿ ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಬಾಳು ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದಾರೆ ಎಂದು ಗುಪ್ತ ಮಾಹಿತಿ ಬಂದ ಮೇರೆಗೆ ಕೂಡಲೇ ದಾಳಿ ನಡೆಸಿದ್ದು ಆ ಸಮಯ ಕೋಳಿ ಅಂಕದಲ್ಲಿ ನಿರತರಾಗಿದ್ದವರು ಓಡಿ ಹೋಗಿದ್ದು ಅವರ ಪೈಕಿ 1) ಗಣೇಶ, 2) ದಿನೇಶ, 3) ಉದಯ, 4) ಗಣೇಶ, 5) ಮಂಜ, 6) ರಾಜೇಶ, 7) ಪ್ರಜ್ವಲ್‌, 8) ನವೀನ್‌,9) ನಿತ್ಯಾನಂದ, 10) ಸುದರ್ಶನ, 11) ಸುಧಾಕರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಕೊಂಡಿದ್ದಾರೆ.

ಆರೋಪಿಗಳು ಕೊಳಿ ಅಂಕಕ್ಕೆ ಬಳಸಿದ 5 ಕೋಳಿ ,ಕೋಳಿ ಕತ್ತಿ-2, ನಗದು ರೂಪಾಯಿ 8260/- ಹಾಗೂ ಮೋಟಾರು ಸೈಕಲ್ , ಕಾರು ,ಆಟೋರಿಕ್ಷಾವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 11(1)A, ಪ್ರಾಣಿ ಹಿಂಸೆ ನಿಷೇದ ಕಾಯಿದೆ ಮತ್ತು 87,93 ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!