ಕುಂದಾಪುರ: ದಿನಾಂಕ:22-10-2024(ಹಾಯ್ ಉಡುಪಿ ನ್ಯೂಸ್) ಸಿಬಿಐ ಅಧಿಕಾರಿಗಳು ಎಂದು ನಂಬಿಸಿ ವ್ಯಕ್ತಿ ಯೋರ್ವರಿಗೆ 3.8 ಲಕ್ಷ ವಂಚನೆ ನಡೆಸಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..
ಕುಂದಾಪುರ ನಿವಾಸಿ ಪ್ರವೀಣ ಕುಮಾರ್ ಎಂಬವರಿಗೆ ದಿನಾಂಕ 19/10/2024 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ನಿಮ್ಮ ಮೊಬೈಲ್ ದೂರವಾಣಿ ಸಂಖ್ಯೆಯು ಇನ್ನು 2 ಗಂಟೆಯೊಳಗೆ ಸ್ಥಗಿತಗೊಳ್ಳುತ್ತದೆ ಅದಕ್ಕೆ ಹೆಚ್ಚಿನ ಮಾಹಿತಿಗಾಗಿ 9 ನ್ನು ಪ್ರೆಸ್ ಮಾಡುವಂತೆ ತಿಳಿಸಿದ್ದು ಅದರಂತೆ 9 ನ್ನು ಪ್ರೆಸ್ ಮಾಡಿದ ಕೂಡಲೇ ಕರೆಯು ಬೇರೆಯವರಿಗೆ ಕನೆಕ್ಟ್ ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವಾಗ ಅವರು ನಿಮ್ಮ ಆಧಾರ್ ಕಾರ್ಡ್ ಪ್ರಾಡ್ ಆಗಿದೆ ಎಂದು ಹೇಳಿ ನಂಬಿಸಿದ್ದು ನಂತರ ಕೂಡಲೇ C.B.I ಲೋಗೋ ಇರುವ ನಂಬ್ರ ದಿಂದ ಕರೆಮಾಡಿ ನಾವು C.B.I ಆಫೀಸರ್ ಎಂದು ತಿಳಿಸಿ ಈ ಬಗ್ಗೆ ಮನಿಲೊಂಡರಿಂಗ್ ನಲ್ಲಿ ನಿಮ್ಮ ಮೇಲೆ ಕೇಸ್ ಆಗಿರುವುದಾಗಿ ತಿಳಿಸಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ ನಿಮ್ಮ ದಾಖಲೆಗಳನ್ನು ತೋರಿಸಿ ಎಂದು ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಪ್ರವೀಣ್ ಕುಮಾರ್ ಅವರು ಆಧಾರ್ ಕಾರ್ಡ್, ಪಾಸ್ ಪುಸ್ತಕ, ಪ್ಯಾನ್ ಕಾರ್ಡ್ ಗಳನ್ನು ತೋರಿಸಿದ್ದು ನಂತರ ಅರ್ದ ಗಂಟೆಯ ನಂತರ ನಿಮ್ಮ ಆಧಾರ್ ಕಾರ್ಡ್ ಮೂಲಕ ಕೆನರಾ ಬ್ಯಾಂಕ್ ಖಾತೆ ಯಿಂದ ಮನಿಲಾಂಡರಿಂಗ್ ಆಗಿರುವುದು ಸಾಭೀತಾಗಿದೆ, ಇದರ ಬಗ್ಗೆ ನಿಮ್ಮ ಮೇಲಿನ ಕೇಸ ನ್ನು ಹಿಂಪಡೆಯಬೇಕಾದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು RTGS ಪಾರಂ ನಲ್ಲಿ ರೂಪಾಯಿ 3,80,000/- ನ್ನು ಬರೆದು ಕಳುಹಿಸಿಕೊಡುವಂತೆ ಈ ಹಣ ಪರಿಶೀಲಿಸಿ ಅದು ಸಾಚಾ ಹಣವಾದಲ್ಲಿ ಮರುಜಮಾ ಅಗುವುದೆಂದು Whatsapp ಮೂಲಕ ಖಾತೆ ನಂಬ್ರವನ್ನು ಕಳುಹಿಸಿದ್ದು, ಬ್ಯಾಂಕ್ ಖಾತೆಗೆ ಪ್ರವೀಣ್ ಕುಮಾರ್ ರವರು ಅವರ ಕೆನರ ಬ್ಯಾಂಕ್ ಖಾತೆಯಿಂದ ರೂಪಾಯಿ 3,80,000/- ವನ್ನು RTGS ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಆ ನಂತರ Whatsapp ವಿಡಿಯೋ ಕಾಲ್ ಮಾಡಿ ಪೊಲೀಸ್ ಅಧಿಕಾರಿ ಉಡುಪಿನಲ್ಲಿರುವ ವ್ಯಕ್ತಿ ಬಂದು ನಿಮ್ಮ ಇನ್ನೊಂದು ಬ್ಯಾಂಕ್ ಗೆ ಹೋಗಿ ಹಣವನ್ನು ಟ್ರಾನ್ಸ್ ಫರ್ ಮಾಡುವಂತೆ ತಿಳಿಸಿದ್ದು, ಆಗ ಪ್ರವೀಣ್ ಕುಮಾರ್ ರವರು ಅನುಮಾನಗೊಂಡು ಪೊಲೀಸರಿಗೆ ತಿಳಿಸುತ್ತೇನೆ ಎಂದು ತಿಳಿಸಿದಾಗ ಪೊಲೀಸ್ ರು ಏನು ಮಾಡುತ್ತಾರೆ ಎಂದು ಉಡಾಫೆಯಿಂದ ಹೇಳಿರುತ್ತಾನೆ ಎನ್ನಲಾಗಿದೆ, ಪ್ರವೀಣ್ ಕುಮಾರ್ ರವರನ್ನು C.B.I ಆಫೀಸರ್ ಎಂದು ಹೇಳಿ 3,80,000/- ರೂಪಾಯಿ ಹಣ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 318(4) BNS & ಕಲಂ: 66 (c ) 66 (D) IT Act ರಂತೆ ಪ್ರಕರಣ ದಾಖಲಾಗಿದೆ.