ಬ್ರಹ್ಮಾವರ: ದಿನಾಂಕ 22/10/2024 ( ಹಾಯ್ ಉಡುಪಿ ನ್ಯೂಸ್) ಅಮ್ಮುಂಜೆ ರಸ್ತೆಯಲ್ಲಿ ಮರಳು ಕಳ್ಳ ಸಾಗಣೆ ಮಾಡುತ್ತಿದ್ದ ಟಿಪ್ಪರ್ ಚಾಲಕ ನನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಅಶೋಕ ಅವರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಅಶೋಕ ಅವರಿಗೆ ದಿನಾಂಕ: 19-10-2024 ರಂದು ಬಂದ ಸಾರ್ವಜನಿಕ ಮಾಹಿತಿಯಂತೆ ಉಪ್ಪೂರು ಗ್ರಾಮದ ಅಮ್ಮುಂಜೆ ಎಂಬಲ್ಲಿಗೆ ತಲುಪಿದಾಗ KA-20C-8161 ನಂಬ್ರದ ಟಿಪ್ಪರ್ ವಾಹನವನ್ನು ಆಪಾದಿತ ಚಾಲಕ ಅಣ್ಣಪ್ಪ ಎಂಬವ ಸ್ವರ್ಣ ನದಿ ಕಡೆಯಿಂದ ಉಪ್ಪೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದನ್ನು ಕಂಡು ಟಿಪ್ಪರ್ ಲಾರಿಯನ್ನು ಪೊಲೀಸರು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 1 ಯೂನಿಟ್ ಮರಳು ಇದ್ದು KA-20-C-8161 ನಂಬ್ರದ ಟಿಪ್ಪರ್ ಲಾರಿಯಲ್ಲಿ ಆಪಾದಿತ ಚಾಲಕ ಅಣ್ಣಪ್ಪ ಟಿಪ್ಪರ್ ಮಾಲೀಕ ಆಪಾದಿತ ಪ್ರಶಾಂತ ಎಂಬವ ತಿಳಿಸಿದಂತೆ ಸ್ವರ್ಣ ನದಿಯಿಂದ ಕೂಲಿ ಕಾರ್ಮಿಕರನ್ನು ಬಳಸಿ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಪರವಾನಿಗೆಯನ್ನು ಹೊಂದದೇ ಸಾಗಾಟ ಮಾಡುತ್ತಿದ್ದರು ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 303(2), 4(1-a), 21(4) MMRD ACT, 66, 192(A) IMV ACT ರಂತೆ ಪ್ರರಕಣ ದಾಖಲಾಗಿದೆ.