ದಿನಾಂಕ:22-10-2024 (ಹಾಯ್ ಉಡುಪಿ ನ್ಯೂಸ್) ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನ ಚಂದು ಮೈದಾನದಲ್ಲಿ ಕರ್ತವ್ಯದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗೌರವ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಹುತಾತ್ಮರನ್ನು ಸ್ಮರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಎಸ್ ಗಂಗಣ್ಣನವರು, ಜಿಲ್ಲಾ ನ್ಯಾಯಾಧೀಶರು, ಡಾ. ಕೆ. ವಿದ್ಯಾ ಕುಮಾರಿ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ, ಶ್ರೀ ವಿನಾಯಕ್ ವಿ ನ್ಯಾಯಾಧೀಶರು, ಶ್ರೀ ಮಿಥುನ್ ಹೆಚ್ ಎನ್ ಪೊಲೀಸ್ ಅಧೀಕ್ಷಕರು ಕರಾವಳಿ ಕಾವಲು ಪಡೆ ಭಾಗವಹಿಸಿದ್ದರು .ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಲಿಪಿಕ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.