Spread the love

ಉಡುಪಿ: ದಿನಾಂಕ 21/10/2024 (ಹಾಯ್ ಉಡುಪಿ ನ್ಯೂಸ್) ಸಿಟಿ ಬಸ್ ನಿಲ್ದಾಣದ ಬಳಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಹೆಡ್‌ ಕಾನ್ಸಟೇಬಲ್‌ ಸುರೇಶ್ ಅವರು ಬಂಧಿಸಿದ್ದಾರೆ

ಉಡುಪಿ ನಗರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಸುರೇಶ್ ಅವರಿಗೆ ದಿನಾಂಕ: 20-10-2024 ರಂದು ಮೂಡನಿಡಂಬೂರು ಗ್ರಾಮದ ನರ್ಮ್‌ ಬಸ್‌ ನಿಲ್ದಾಣದ ಪಾರ್ಕಿಂಗ್‌ ಸ್ಥಳದ ಪಶ್ಚಿಮ ಬದಿಯಲ್ಲಿ ಇರುವ ಖಾಲಿ ಸ್ಥಳದಲ್ಲಿ ಓರ್ವ ವ್ಯಕ್ತಿಯು ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಸ್ಥಳವನ್ನು ತಲುಪಿ ಅಲ್ಲಿ ಸಾರ್ವಜನಿಕರಿಗೆ ಮದ್ಯ ಹಾಕಿ ಕೊಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಆ ವ್ಯಕ್ತಿ ಯನ್ನು ವಿಚಾರಣೆ ನಡೆಸಿದಾಗ  ತನ್ನ ಹೆಸರು ಭೀಮನಗೌಡ ಎಂದು ತಿಳಿಸಿದ್ದು, ತಾನು MSIL ನಿಂದ ಮದ್ಯದ ಸಾಚೆಟ್‌ಗಳನ್ನು ಖರೀದಿಸಿಕೊಂಡು ಸ್ವಂತ ಲಾಭಕೋಸ್ಕರ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಆತನಿಂದ 270/- ರೂಪಾಯಿ ನಗದು ಹಣ, ಮಧ್ಯದ ಖಾಲಿ ಸಾಚೆಟ್‌ಗಳು, ನೀರಿನ ಬಾಟೆಲ್‌ ಹಾಗೂ ಗ್ಲಾಸ ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 32(3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!