ಬ್ರಹ್ಮಾವರ: ದಿನಾಂಕ: 11-10-2024( ಹಾಯ್ ಉಡುಪಿ ನ್ಯೂಸ್) ಹಣ ದ್ವಿಗುಣ ಗೊಳಿಸಿ ಕೊಡುವುದಾಗಿ ನಂಬಿಸಿ ಬ್ರಹ್ಮಾವರ ನಿವಾಸಿ ಯೋರ್ವರಿಗೆ ಏಳು ಲಕ್ಷ ರೂಪಾಯಿ ವಂಚನೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.
ಬ್ರಹ್ಮಾವರ ನಿವಾಸಿ ಮಂಜುನಾಥ (30) ಎಂಬವರಿಗೆ ದಿನಾಂಕ 25/09/2024 ರಂದು ಅವರ ಟೆಲಿಗ್ರಾಂ ಖಾತೆಗೆ The Perth Mint Gold ಎಂಬ ಕಂಪೆನಿಗೆ ಹಣ ಹೂಡಿಕೆ ಮಾಡಿದ್ದಲ್ಲಿ ಅಧಿಕ ಲಾಭಾಂಶ ಮತ್ತು ಅತೀ ಬೇಗ ಹಣ ದ್ವಿಗುಣಗೊಳ್ಳುವುದಾಗಿ ಸಂದೇಶ ಕಳುಹಿಸಿ, ಮಂಜುನಾಥ ಅವರನ್ನು ನಂಬಿಸಿ ಪರಿಚಿತ ವ್ಯಕ್ತಿ ಯೋರ್ವನು ನೀಡಿದ ಖಾತೆಗಳಿಗೆ ಮಂಜುನಾಥರಿಂದ ಒಟ್ಟು ರೂಪಾಯಿ 6,51,315/- ಹಣವನ್ನು Net Banking ಮುಖೇನಾ ವರ್ಗಾವಣೆ ಮಾಡಿಸಿಕೊಂಡು ಮಂಜುನಾಥ ರವರಿಗೆ ಮೋಸ ಮಾಡಿರುವುದಾಗಿ ದೂರು ನೀಡಿದ್ದಾರೆ.
ಮಂಜುನಾಥರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 66(C), 66(D) IT ACT ರಂತೆ ಪ್ರಕರಣ ದಾಖಲಾಗಿದೆ.