Spread the love

ಉಡುಪಿ: ದಿನಾಂಕ :11-10-2024(ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಗಂಡನ ಮನೆಯವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ , ರೆಂಜಾಳ ಗ್ರಾಮದ ನಿವಾಸಿ ಸುಕೇತ (38) ಎಂಬವರಿಗೆ ದಿನಾಂಕ 29/04/2005 ರಂದು ಆರೋಪಿ ರಿತೇಶ್ ಅತಿಕಾರಿ ಎಂಬವರೊಂದಿಗೆ ಕಾರ್ಕಳದ ಬಾಹುಬಲಿ ಕಲ್ಯಾಣ ಮಂಟಪದಲ್ಲಿ ಮದುವೆ ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ .

ಮದುವೆಯ ನಂತರ ಸುಕೇತರವರು  ಆರೋಪಿ ಗಂಡ ರಿತೇಶ್ ಅತಿಕಾರಿ ಯವರೊಂದಿಗೆ ಮಿಯ್ಯಾರಿನಲ್ಲಿ ಆರೋಪಿತರ ಮನೆಯಲ್ಲಿ ವಾಸವಾಗಿದ್ದು, 10 ದಿನಗಳ ನಂತರ ರಿತೇಶ್ ಅತಿಕಾರಿಯು ಸುಕೇತ ಅವರನ್ನು  ಮುಂಬೈಗೆ ಕರೆದುಕೊಂಡು ಹೋಗಿದ್ದು ಅಲ್ಲಿ ರಿತೇಶ್ ಅತಿಕಾರಿಯು ಸುಕೇತ ರವರಿಗೆ ಹಲ್ಲೆ ಮಾಡಿ ಬೆದರಿಕೆ ಹಾಕಿರುತ್ತಾನೆ ಎಂದು ಸುಕೇತ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ರಿತೇಶ್ ಅತಿಕಾರಿಯು  ತನಗೆ ಸುಕೇತರನ್ನು  ಮದುವೆಯಾಗಲು ಇಷ್ಟ ಇರಲಿಲ್ಲ ,ಮನೆಯವರ ಒತ್ತಡಕ್ಕೆ ಒಳಗಾಗಿ ಮದುವೆ ಆಗಿರುತ್ತೇನೆ ಎಂದು ಹೇಳಿ ಸುಕೇತ ರನ್ನು ಕೀಳಾಗಿ ನೋಡಲು ಆರಂಭಿಸಿರುತ್ತಾನೆ ಎಂದಿದ್ದಾರೆ .ನಂತರದ ದಿನಗಳಲ್ಲಿ ಮುಂಬಯಿಯ ಸುಕೇತರವರ ಗಂಡನ ಮನೆಯಲ್ಲಿ ವಾಸವನ್ನು ಮುಂದುವರೆಸಿದ್ದು ಸುಕೇತರವರ ಗಂಡನ ಅಣ್ಣ ಸಂತೋಷ್ ಅತಿಕಾರಿ , ತಮ್ಮ ಸಂದೇಶ್ ಅತಿಕಾರಿ, ನಿಲೇಶ್ ಅತಿಕಾರಿ, ರವರುಗಳ ಕಣ್ಣ ಮುಂದೆಯೇ ಗಂಡ ರಿತೇಶ್ ಅತಿಕಾರಿಯು ಸುಕೇತರವರಿಗೆ   ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರೂ ಕೂಡಾ ಸುಕೇತರವರನ್ನು ರಕ್ಷಿಸದೇ ಆರೋಪಿ ರಿತೇಶ್ ಅತಿಕಾರಿಗೆ ಗಂಡನ ಮನೆಯವರು ಬೆಂಬಲ ನೀಡಿರುತ್ತಾರೆ ಎಂದು ದೂರಿದ್ದಾರೆ.

ಸುಕೇತ ರವರು ಗಂಡ ರಿತೇಶ್ ಅತಿಕಾರಿಯೊಂದಿಗೆ ಮಿಯ್ಯಾರಲ್ಲಿರುವ ಮನೆಗೆ ಹೋಗಿದ್ದಾಗ ಅಲ್ಲಿ ಕೂಡ  ಸುಕೇತರವರ ಗಂಡನ ತಂಗಿ ಸುಷ್ಮಾ ಪ್ರಥ್ವಿರಾಜ್ ರವರು ಸುಕೇತರವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದು, ಗಂಡ ರಿತೇಶ್ ಅತಿಕಾರಿಯು ಸುಕೇತ ರವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರೂ ಕೂಡಾ ಸಂತೋಷ್ ಅತಿಕಾರಿ, ಶರ್ಮಿತಾ ಅತಿಕಾರಿ, ಸಂದೇಶ್ ಅತಿಕಾರಿ, ನಿಲೇಶ್ ಅತಿಕಾರಿ, ಸುಷ್ಮಾ ಪ್ರಥ್ವಿರಾಜ್ ಇವರು ಸುಕೇತರವರನ್ನು ರಕ್ಷಿಸದೇ ಆರೋಪಿ ರಿತೇಶ್ ಅತಿಕಾರಿಗೆ ಬೆಂಬಲ ನೀಡಿ ಮಾನಸಿಕ ಹಿಂಸೆ ನೀಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸುಕೇತ ಅವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಲಂ: 85, 115(2), 351(2), ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!