ಕಾಪು: ದಿನಾಂಕ:11-10-2024( ಹಾಯ್ ಉಡುಪಿ ನ್ಯೂಸ್) ಫಕೀರನಕಟ್ಟೆ ಜಂಕ್ಷನ್ ಬಳಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಯುವಕನನ್ನು ಕಾಪು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಅಬ್ದುಲ್ ಖಾದರ್ ಅವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆ ಪಿಎಸ್ಐ ಯವರಾದ ಅಬ್ದುಲ್ ಖಾದರ್ ಅವರು ದಿನಾಂಕ: 08.10.2024 ರಂದು ಸಿಬ್ಬಂದಿ ಯವರೊಂದಿಗೆ ಮಲ್ಲಾರು ಗ್ರಾಮದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸುಮಾರು ರಾತ್ರಿ 11:00 ಗಂಟೆಗೆ ಕಾಪು ತಾಲೂಕು ಮಲ್ಲಾರು ಗ್ರಾಮದ ಫಕೀರನಕಟ್ಟೆ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ನಿಂತಿರುವುದಲ್ಲದೇ ಮಾದಕ ದ್ರವ್ಯವನ್ನು ಸೇವನೆ ಮಾಡಿ ನಶೆಯಲ್ಲಿ ಇರುವುದು ಕಂಡು ಬಂದಿದ್ದು, ಪೊಲೀಸರು ಅನುಮಾನಗೊಂಡು ಆತನ ಬಳಿ ಹೋಗಿ ಆತನ ಹೆಸರು, ವಿಳಾಸ ವಿಚಾರಿಸಿದಾಗ ಆರೀಫ್, ಪ್ರಾಯ: 36 ವರ್ಷ ಬೆಳಪು ಗ್ರಾಮ, ಕಾಪು ಎಂಬುದಾಗಿ ತಿಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಲು ವೈದ್ಯಾಧಿಕಾರಿಯವರು, ಸಮುದಾಯ ಆರೋಗ್ಯ ಕೇಂದ್ರ, ಶಿರ್ವ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು , ದಿನಾಂಕ: 10/10/2024 ರಂದು ಬಂದ ತಜ್ಞರ ವರದಿಯಲ್ಲಿ ಆಪಾದಿತನಾದ ಆರೀಫ್ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಆರೋಪಿ ಆರೀಫ್ ನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 126/2024 U/S 27 (B) NDPS ನಂತೆ ಪ್ರಕರಣ ದಾಖಲಾಗಿದೆ.