Spread the love

ಕಾರ್ಕಳ: ದಿನಾಂಕ:  05-10-2024(ಹಾಯ್ ಉಡುಪಿ ನ್ಯೂಸ್)   ಶಾಲಾ ಬಸ್ ಚಾಲಕ ರೋರ್ವರಿಗೆ ಅಪರಿಚಿತ ಯುವಕನೋರ್ವ ಬಸ್ಸನ್ನು ತಡೆದು ಚಾಲಕನಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್ಕಳ ತಾಲೂಕು , ವೇಣು ಗೋಪಾಲ ದೇವಸ್ಥಾನ ಬಳಿ ನಿವಾಸಿ ಸುರೇಶ್ (55) ಎಂಬವರು ದಿನಾಂಕ 04.10.2024 ರಂದು ಮಧ್ಯಾಹ್ನ  ಶ್ರೀಭುವನೇಂದ್ರ ರೆಸಿಡೆನ್ಸಿಯಲ್‌ ಸ್ಕೂಲ್‌ ನಿಂದ ಮಕ್ಕಳನ್ನು ಕರೆದುಕೊಂಡು ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಆನೆಕೆರೆ ಭವಾನಿ ಮಿಲ್ ನ ಹತ್ತಿರ ಪಾಯಸ್‌ ಗ್ಯಾರೇಜ್‌ ಎದುರಿಗೆ ಹೋಗುತ್ತಿರುವಾಗ ಅಪರಿಚಿತ KA 20 EP 2838 ನೇ ಮೋಟಾರ್‌ ಸೈಕಲ್‌ ನ ಸವಾರನು ವಿರುದ್ದ ದಿಕ್ಕಿನಲ್ಲಿ ಮೋಟಾರ್‌ ಸೈಕಲ ನ್ನು ಸವಾರಿ ಮಾಡಿಕೊಂಡು ಬಂದು ಬಸ್ಸಿನ ಎದುರಿಗೆ ಮೋಟಾರ್‌ ಸೈಕಲ ನ್ನು ಅಡ್ಡ ನಿಲ್ಲಿಸಿ ಕೈಯಲ್ಲಿ ಹೇಲ್ಮೇಟ ನ್ನು ಹಿಡಿದುಕೊಂಡು ಬಸ್ಸನ್ನು ಹತ್ತಿ ಸುರೇಶ್  ಅವರನ್ನು ಚಾಲಕ ಸೀಟಿನಿಂದ ಕೆಳಗೆ ಎಳೆದು ಕೈಯಲ್ಲಿದ್ದ ಹೇಲ್ಮೇಟ್‌ ನಿಂದ  ಸುರೇಶರವರ ತಲೆಗೆ ಬಲವಾಗಿ ಹೊಡೆದು ರಕ್ತ ಬರುವಂತೆ ಗಾಯವನ್ನುಂಟು ಮಾಡಿ ಸುರೇಶ್ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನಾನು ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಸುರೇಶ್ ರವರು ದೂರು ನೀಡಿದ್ದಾರೆ.

ಸುರೇಶ್ ರವರನ್ನು ಶಾಲಾ ವಾಹನದ ನಿರ್ವಾಹಕಿ ಸವಿತಾ ರವರು ಚಿಕಿತ್ಸೆಯ ಬಗ್ಗೆ ಕಾರ್ಕಳ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿರುತ್ತಾರೆ ಎನ್ನಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ  ಕಲಂ: 126(2), 115(2), 118(1), 352, 351 BNS ನಂತೆ ಪ್ರಕರಣ ದಾಖಲಾಗಿದೆ.

error: No Copying!