Spread the love

ಶಂಕರನಾರಾಯಣ: ದಿನಾಂಕ :05-10-2024(ಹಾಯ್ ಉಡುಪಿ ನ್ಯೂಸ್)  ಸಿದ್ದಾಪುರ ಗ್ರಾಮದ ನಿವಾಸಿ ಯೋರ್ವರಿಗೆ ಅವರ ಪತ್ನಿ ಹಾಗೂ ಇತರರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು, ಸಿದ್ದಾಪುರ ಗ್ರಾಮದ ನಿವಾಸಿ ಗಣಪತಿ ಎನ್ ಜಿ (44) ಎಂಬವರು ಸುಮಂಗಲಾ ಎಂಬವಳ ಜೊತೆ ವಿವಾಹವಾಗಿದ್ದು ಸುಮಾರು 6 ವರ್ಷಗಳ ಕಾಲ ಸಂಸಾರವನ್ನು ಮಾಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ನಂತರ ಸುಮಂಗಲಾ ಅವರು ಗಣಪತಿ ಎನ್ ಜಿ ರವರನ್ನು ಹಾಗೂ ಮಕ್ಕಳನ್ನು ಬಿಟ್ಟು ತಾಯಿ ರತ್ನಾರವರ ಮನೆಯಲ್ಲಿ ಗಣಪತಿ ಎನ್ ಜಿ ರವರ ಮನೆಯ ಪಕ್ಕದಲ್ಲೆ ವಾಸಮಾಡಿಕೊಂಡಿರುತ್ತಾಳೆ ಎಂದಿದ್ದಾರೆ.

ದಿನಾಂಕ 21-09-2024 ರಂದು ರಾತ್ರಿ  ಸಮಯಕ್ಕೆ ಸುಮಂಗಲಾ ರವರು  ಗಣಪತಿ ಎನ್ ಜಿ ರವರೊಂದಿಗೆ ವಿನಃ ಕಾರಣ ಜಗಳ ತೆಗೆದಿದ್ದು ಆ ಸಮಯಕ್ಕೆ ಸುಮಂಗಲಾ ರವರ ತಾಯಿ ರತ್ನಾ, ಸದಾ , ಸಚಿನ್ , ಸತೀಶ್ ಎಂಬವರ ಮಗ ಹಾಗೂ ಮೊಬೈಲ್ ಅಂಗಡಿಯವರು ಅಕ್ರಮ ಕೂಟವನ್ನು ಸೇರಿಕೊಂಡು ಗಣಪತಿ ಎನ್ ಜಿ ರವರ ವರ್ಕ್ ಶಾಪ್ ಗೆ ನುಗ್ಗಿ ಏಕಾಏಕಿಯಾಗಿ ಕೈಯಿಂದ ಮುಖಕ್ಕೆ, ಎದೆಗೆ ಹೊಡೆದು ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿಹಿಡಿದು ಹೊಡೆದಿರುತ್ತಾರೆ ಎಂದು ದೂರಿದ್ದಾರೆ.

ಇದರಿಂದ  ಗಣಪತಿ ಎನ್ ಜಿ ರವರ ಕಿವಿಯಲ್ಲಿ ರಕ್ತ ಬಂದಿರುತ್ತದೆ ಎಂದಿದ್ದಾರೆ.ನಂತರ ಅಲ್ಲೆ ಇದ್ದ ಮರದ ರೀಪಿನಿಂದ ಹೊಡೆದು ತುಳಿದಿರುತ್ತಾರೆ ಎಂದಿದ್ದಾರೆ, ಆರೋಪಿಗಳೆಲ್ಲರೂ ಸೇರಿ ಗಣಪತಿ ಎನ್ ಜಿ ರವರ ಸ್ಕೂಟಿ ಹಾಗೂ ಮರದ ಬಾಗಿಲನ್ನು ಜಖಂಗೊಳಿಸಿ, ಗಣಪತಿ ಎನ್ ಜಿ ರವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಗಣಪತಿ ಎನ್ ಜಿ ರವರು ತನಗಾದ  ನೋವಿನ ಬಗ್ಗೆ ದಿನಾಂಕ 22-09-2024 ರಂದು ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ:189(2), 191(2), 191(3), 324(4),115(2), 118(1), 351(2) 329(4) R/W 190 BNS ನಂತೆ ಪ್ರಕರಣ ದಾಖಲಾಗಿದೆ.

error: No Copying!