Spread the love

ಹಿರಿಯಡ್ಕ: ದಿನಾಂಕ 04-10- 2024 ( ಹಾಯ್ ಉಡುಪಿ ನ್ಯೂಸ್) ಮಠದ ಮಕ್ಕಿ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಹಿರಿಯಡ್ಕ ಪೊಲೀಸ್‌ ಠಾಣೆಯ ಪೊಲೀಸ್‌ ಉಪ ನಿರೀಕ್ಷಕರಾದ (ಕಾ & ‍ಸು) ಮಂಜುನಾಥ ಮರಬದ ಅವರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಹಿರಿಯಡ್ಕ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಮರಬದ ಅವರು ದಿನಾಂಕ :03-10-2024 ರಂದು ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಕುಡ್ತುರಬೈಲು, ಮಠದಮಕ್ಕಿ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ಹೋದಾಗ ಇಬ್ಬರು ಯುವಕರು ಹೊಳೆಯ ದಡದ ಬಳಿಯಲ್ಲಿದ್ದ ಮರಳನ್ನು ಕಳ್ಳತನ ಮಾಡುವ ಉದ್ದೇಶದಿಂದ ಟಿಪ್ಪರ್‌ ಟೆಂಪೋಗೆ ಲೋಡ್‌ ಮಾಡುತ್ತಿದ್ದರು ಎನ್ನಲಾಗಿದೆ.

ಪೊಲೀಸರು ಅವರನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ತಮ್ಮ ಹೆಸರನ್ನು 1) ದಿಲೀಪ್‌, 2) ಸಚಿನ್‌ ಎಂದು ತಿಳಿಸಿದ್ದು ಅವರು ಮರಳನ್ನು ತೆಗೆಯಲು ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ ಎನ್ನಲಾಗಿದೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಸರಕಾರಿ ಜಾಗದಿಂದ ಲಾಭಗಳಿಸುವ ಉದ್ದೇಶಕ್ಕೋಸ್ಕರ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸ್ವಂತ ಲಾಭಕ್ಕಾಗಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ KL-23-F-9380 ನೇ ನಂಬರ್ ನ ಟೆಂಪೋ, 1½ ಯುನಿಟ್‌ನಷ್ಟು ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2) BNS ACT 4(1-a) 21(4) MMRD Act 1957 US 66 R/W 192 (A) IMV Act ರಂತೆ ಪ್ರಕರಣ ದಾಖಲಾಗಿದೆ.

error: No Copying!