ಮಲ್ಪೆ: ದಿನಾಂಕ: 03/10/2024 (ಹಾಯ್ ಉಡುಪಿ ನ್ಯೂಸ್) ರಾಷ್ಟ್ರೀಯ ಹೆದ್ದಾರಿಯ ಕಪ್ಪೆಟ್ಟುವಿನಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಚಾಲಕ ನನ್ನು ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಲೋಹಿತ್ ಕುಮಾರ್ ಸಿ.ಎಸ್ ಅವರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪಿಎಸ್ಐ (ತನಿಖೆ) ಲೋಹಿತ್ ಕುಮಾರ್ ಸಿ.ಎಸ್ ಅವರು ದಿನಾಂಕ : 03-10-2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಠಾಣಾ ವ್ಯಾಪ್ತಿಯ ಕಿದಿಯೂರು ಗ್ರಾಮದ ಕಪ್ಪೆಟ್ಟು ನೇತ್ರ ಜ್ಯೋತಿ ಕಾಲೇಜಿನ ಸಮೀಪ ರಾ.ಹೆ 66 ರಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಟಿಪ್ಪರನ್ನು ಅದರ ಚಾಲಕನು ಮಂಗಳೂರು ಕಡೆಯಿಂದ ಸಂತೆಕಟ್ಟೆ ಕಡೆಗೆ ಅನುಮಾನಾಸ್ಪದವಾಗಿ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ವಾಹನವನ್ನು ನಿಲ್ಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.
ಟಿಪ್ಪರ್ ಚಾಲಕ ವಾಹನವನ್ನು ಸ್ವಲ್ಪ ಮುಂದಕ್ಕೆ ತಂದು ನಿಲ್ಲಿಸಿದ್ದು, ಪೊಲೀಸರು KL02AF7012 ನಂಬ್ರದ ಟಿಪ್ಪರ್ ವಾಹನದ ಹತ್ತಿರ ಹೋಗಿ ಪರಿಶೀಲಿಸಿದಾಗ ಟಿಪ್ಪರ್ ನ ಬಾಡಿಯನ್ನು ನೋಡಿದಾಗ ಬಾಡಿಯಲ್ಲಿ ಮರಳು ತುಂಬಿರುವುದು ಕಂಡುಬಂದಿರುತ್ತದೆ ಎನ್ನಲಾಗಿದೆ. ಚಾಲಕ ನಲ್ಲಿ ವಿಚಾರಿಸಿದಾಗ ಮರಳು ಸಾಗಾಟಕ್ಕೆ ಸಂಬಂಧಿಸಿ ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಮರಳನ್ನು ಮೂಲ್ಕಿಯ ಸಂಕಲಕೆರೆ ಎಂಬಲ್ಲಿಂದ ತಂದಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ವಿಳಾಸ ವಿಚಾರಿಸಿದಾಗ ಪುನೀತ್ (22) ಹೆಂಗವಳ್ಳಿ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ವಾಹನದ ಬಾಡಿಯಲ್ಲಿ ಸುಮಾರು 3 ಯುನಿಟ್ ನಷ್ಟು ಮರಳು ಇದ್ದು ಅದರ ಅಂದಾಜು ಮೌಲ್ಯ ರೂ. 12,000/- ಆಗಬಹುದು ಎನ್ನಲಾಗಿದೆ. ಈ ಟಿಪ್ಪರ್ ವಾಹನದ ಚಾಲಕನು ಮರಳನ್ನು ಕಳವು ಮಾಡಿ ಟಿಪ್ಪರ್ ನಲ್ಲಿ ತುಂಬಿಸಿಕೊಂಡು ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 303(2) BNS ಮತ್ತು 4(A), 21 MMDR ನಂತೆ ಪ್ರಕರಣ ದಾಖಲಾಗಿದೆ.