Spread the love

ಕಾರ್ಕಳ: ದಿನಾಂಕ : 27/09/2024 (ಹಾಯ್ ಉಡುಪಿ ನ್ಯೂಸ್) ಹೆಬ್ರಿಯ ಮನೆಯೊಂದರಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದ ವ್ಯಕ್ತಿ ಯನ್ನು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ (ತನಿಖೆ) ಮಹಾಂತೇಶ ಜಾಬಗೌಡ ಆವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಮಹಾಂತೇಶ ಜಾಬಗೌಡ ಆವರು ದಿನಾಂಕ:26-09-2024 ರಂದು ಶಾಜಿ ಮ್ಯಾಥ್ಯೂ ಎಂಬುವವರ ಮನೆಯಲ್ಲಿ ಸಿಬ್ಬಂದಿಯವರೊಂದಿಗೆ  ನ್ಯಾಯಾಲಯದ ಸರ್ಚ್ ವಾರಂಟ್‌ನಂತೆ ಶೋಧನೆ ಮಾಡುತ್ತಿದ್ದಾಗ ಮನೆಯ ಸ್ಟೋರ್ ರೂಮ್‌ನ ಸೋಫಾದಲ್ಲಿ ಒಂದು ಪ್ಲಾಸ್ಟಿಕ್ ಜಿಪ್ ಲಾಕ್ ಕವರ್‌ನಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾದ ಎಲೆ, ಮೊಗ್ಗು ಮತ್ತು ಹೂವಿನ ಭಾಗಗಳು ಇದ್ದು, ಅಪಾದಿತ ಸುನಿಲ್ ಜೋಸೆಫ್ ಟಿ ಎಸ್ ಎಂಬಾತನು ತನ್ನ ವಾಸದ ಮನೆಯಲ್ಲಿ ನಿಷೇಧಿತ ಗಾಂಜಾ ಇರಿಸಿಕೊಂಡಿದ್ದನು ಎಂದು ದೂರು ದಾಖಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಕಲಂ:8 (c) ,20 (b)(ii) (a) ಎನ್.ಡಿ.ಪಿ.ಎಸ್. ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.

error: No Copying!