Spread the love

ಹೆಬ್ರಿ: ದಿನಾಂಕ:  27/09/2024 (ಹಾಯ್ ಉಡುಪಿ ನ್ಯೂಸ್) ನಾಲ್ಕೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಬರೆಯುತ್ತಿದ್ದ ವ್ಯಕ್ತಿಯನ್ನು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ ಟಿ ಎಮ್ ಅವರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹೇಶ ಟಿ.ಎಮ್ ಅವರು ದಿನಾಂಕ: 25-09-2024 ರಂದು ರೌಂಡ್ಸ್‌ ನಲ್ಲಿರುವಾಗ ಸಂಜೆ ನಾಲ್ಕೂರು ಗ್ರಾಮದ ಚಾಕ್ಟಿಕಟ್ಟೆ ಪೇಟೆಯ ಗಿರೀಶ ಎಂಬವರ ಪಾಸ್ಟ್‌ ಪುಡ್‌ ಅಂಗಡಿ ಪಕ್ಕ ಸಣ್ಣ ಪಾಳುಬಿದ್ದ ಗೂಡಂಗಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಎಂಬ ಅಟ ಆಡುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿದ್ದಾರೆ.

ದಾಳಿ ಮಾಡಿದಾಗ ಮಟ್ಕಾ ಬರೆಸುತ್ತಿದ್ದ ಒಬ್ಬ ಓಡಿ ಹೋಗಿದ್ದು ಸಿಬ್ಬಂದಿಗಳ ಸಹಾಯದಿಂದ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಬಂಧಿಸಿ ವಶಕ್ಕೆ ಪಡೆದು ಆತನ ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು ಶಂಕರ (61) ಎಂದು ತಿಳಿಸಿದ್ದು ಆತನ ಅಂಗಿಯ ಕಿಸೆಯಲ್ಲಿ ನಗದು 2,020/- ರೂಪಾಯಿ, ಮಟ್ಕಾ ನಂಬ್ರ ಬರೆದ ಪುಸ್ತಕ ಹಾಗೂ ಬಾಲ್ ಪೆನ್ನು ಸ್ವಾಧೀನಪಡಿಸಿಕೊಂಡಿದ್ದಾರೆ .

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 78(1)(3) KP ACT ರಂತೆ ಪ್ರರಕಣ ದಾಖಲಾಗಿದೆ.

error: No Copying!