
ದಿನಾಂಕ:23-09-2024(ಹಾಯ್ ಉಡುಪಿ ನ್ಯೂಸ್)
ಶ್ರೀಮತಿ ಜ್ಯೋತಿ ಚಂದ್ರಕಾಂತ್ ಶೆಟ್ಟಿಗಾರ್ ಅಂಬಲಪಾಡಿ ಇವರು ಚಿಕ್ಕಂದಿನಿಂದಲೂ ತುಳುನಾಡ ಗಂಡುಕಲೆಯೆಂದೇ ಪ್ರಸಿದ್ದವಾಗಿರುವ ಯಕ್ಷಗಾನ ಕಲಾಕ್ಷೇತ್ರದಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು,ಸಾಂಸಾರಿಕ ಜೀವನಕ್ಕೆ ಕಾಲಿಟ್ಟರೂ ತನ್ನ ಪತಿ ಚಂದ್ರಕಾಂತ್ ಶೆಟ್ಟಿಗಾರ್ ರವರ ಸಂಪೂರ್ಣ ಬೆಂಬಲವನ್ನು ಪಡೆದು ತಮಗಿರುವ ಯಕ್ಷಗಾನ ಕಲಾ ಕ್ಷೇತ್ರದಲ್ಲಿನ ಆಸಕ್ತಿಯನ್ನು ತ್ಯಜಿಸದೆ ಸಾಂಸಾರಿಕ ಜೀವನದೊಟ್ಟಿಗೆ ಯಕ್ಷಗಾನ ಕಲಾಕ್ಷೇತ್ರದಲ್ಲಿ ತೊಡಗಿಕೊಂಡು ತಾರೀಕು 22/09 /2024 ರಂದು ಪದ್ಮಶಾಲಿ ಸೇವಾಸಮಿತಿ,ಕಾಡುಮಠ ಗ್ರಾಮ,ವಿಟ್ಲವಲಯ’ದ ದಶಮಾನೋತ್ಸವದ ಅಂಗವಾಗಿ ನಡೆದ ಕಲಾ ಸಂಭ್ರಮದಲ್ಲಿ ವೈವಿಧ್ಯಮಯ ಮನೋರಂಜನೆ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿ ಪ್ರಶಸ್ತಿ ಪಡೆದಿರುತ್ತಾರೆ…