Spread the love

ಉಡುಪಿ: ದಿನಾಂಕ:23-09-2024(ಹಾಯ್ ಉಡುಪಿ ನ್ಯೂಸ್)

ಇತ್ತೀಚಿಗೆ ಉಡುಪಿ ಅಂಬಾಗಿಲು ಜಂಕ್ಷನ್ ಅಲ್ಲಿ  ಸರಕಾರಿ ರೋಡ್ ಸರ್ವಿಸ್ ರೋಡ್ ಒತ್ತುವರಿ ಮಾಡಿಕೊಂಡು ಅಕ್ರಮ ಕಾರ್ ಶೆಡ್ ,ಅಂಗಡಿ ಮಾಡಿಕೊಂಡಿರುವವರ ಮೇಲೆ ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಆದರೆ ಅತಿಕ್ರಮಣ ಮಾಡಿ ಕೊಂಡಿರುವವರು  ನಗರಸಭೆಯವರಿಗೆ ಕೊಡುವುದು ಕೊಟ್ಟಿದ್ದೇವೆ  ಎಂದು ಹೇಳಿ ಕೊಂಡು ಸಾರ್ವಜನಿಕರಲ್ಲಿ ಉಡಾಫೆಯ ವರ್ತನೆ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅಲ್ಲದೇ ಹನುಮಂತ ದೇವಸ್ಥಾನದ ಬಳಿ ಪರವಾನಿಗೆ ಇಲ್ಲದೆ ತರಕಾರಿ, ಹಣ್ಣಿನ ಅಂಗಡಿಗಳು ತಲೆ ಎತ್ತಿರುವುದು ಈ ಬಗ್ಗೆಯೂ ಸ್ಥಳೀಯರು ನಗರ ಸಭೆಗೆ ಲಿಖಿತ ದೂರು ನೀಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ದೂರು ಬಂದರೂ ಸಹ ಇನ್ನೂ ನಗರ ಸಭೆಯ ಅಧಿಕಾರಿಗಳು ಅಕ್ರಮ ನಿರ್ಮಾಣ ತೆರವುಗೊಳಿಸದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಕ್ರಮ ವ್ಯವಹಾರ ಮಾಡಿ ಕೊಂಡಿರುವವರು ಕೊಡುವುದು ಕೊಟ್ಟಿದ್ದೇವೆ  ಎನ್ನುತ್ತಿದ್ದಾರೆ ,ನಗರಸಭೆಯ ಅಧಿಕಾರಿಗಳು ಸುಮ್ಮನೆ ಇದ್ದಾರೆ ; ಹಾಗಾದರೆ ಅಕ್ರಮ ತೆರವುಗೊಳಿಸುವವರು ಯಾರು ಎಂದು ಪೌರಾಯುಕ್ತರು ಉತ್ತರಿಸ ಬೇಕಾಗಿದೆ.

ಈ ಕೂಡಲೇ ಅಕ್ರಮ ಕಾರ್ ಶೆಡ್ ಮತ್ತು ಅಕ್ರಮ ಅಂಗಡಿಗಳನ್ನು ನಗರ ಸಭೆಯ ಅಧಿಕಾರಿಗಳು ತೆರವು ಮಾಡಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

error: No Copying!