Spread the love
  • ಅಜೆಕಾರು: ದಿನಾಂಕ : 24/9/2024 (ಹಾಯ್ ಉಡುಪಿ ನ್ಯೂಸ್) ಬೈಲಂಗಡಿ ಹಾಡಿಯಲ್ಲಿ ಕೋಳಿ ಅಂಕ ನಡೆಯುತ್ತಿದ್ದಲ್ಲಿಗೆ ಅಜೆಕಾರು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಗಣೇಶ ಅವರು ದಾಳಿ ನಡೆಸಿದ್ದಾರೆ.
  • ಅಜೆಕಾರು ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಗಣೇಶ ಆವರು ದಿನಾಂಕ: 22-09-2024 ರಂದು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕುಕ್ಕುಜೆ ಗ್ರಾಮದ ಬೈಲಂಗಡಿ ಎಂಬಲ್ಲಿರುವ ಹಾಡಿಯಲ್ಲಿ ಕೋಳಿ ಅಂಕ ನಡೆಯುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ಕುಕ್ಕುಜೆ ಗ್ರಾಮದ ಬೈಲಂಗಡಿ ಹಾಡಿಗೆ ದಾಳಿ ನಡೆಸಿದ್ದಾರೆ.
  • ಪೊಲೀಸರು ದಾಳಿ ನಡೆಸಿದಾಗ ಹಾಡಿಯಲ್ಲಿ ಹಲವು ಜನ ಸಾರ್ವಜನಿಕರು ಕೈಯಲ್ಲಿ ಕೋಳಿಗಳನ್ನು ಹಿಡಿದುಕೊಂಡು ಓಡಿ ಹೋಗಿದ್ದಾರೆ ಎನ್ನಲಾಗಿದೆ.ಪೋಲೀಸರು ಸ್ಥಳವನ್ನು ಪರಿಶೀಲಿಸಿದಾಗ 5 ಮೋಟಾರು ಸೈಕಲ್‌ಗಳನ್ನು ಸ್ಥಳದಲ್ಲಿ ಓಡಿ ಹೋಗುತ್ತಿರುವವರು ಬಿಟ್ಟು ಹೋಗಿದ್ದಾರೆ . ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕವಾಗಿ ಬಾಳುಗಳನ್ನು ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದರು ಎಂದು ದೂರು ನೀಡಿದ್ದಾರೆ.
  • ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ  ಕಲಂ: 11 (1) (n) ಪ್ರಾಣಿ ಹಿಂಸೆ ತಡೆ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!