ಬೈಂದೂರು: ದಿನಾಂಕ: 14-09-2024 (ಹಾಯ್ ಉಡುಪಿ ನ್ಯೂಸ್) ಕೇರಳದ ರೈಲ್ವೇ ಪ್ರಯಾಣಿಕರೋರ್ವರ ಚಿನ್ನಾಭರಣ, ಮೊಬೈಲ್ ಇದ್ದ ಪರ್ಸ್ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ಕಳ್ಳತನ ಆಗಿರುವ ಬಗ್ಗೆ ದೂರು ದಾಖಲಾಗಿದೆ.
ಕೇರಳ ನಿವಾಸಿ ಜಯಪ್ರಕಾಶ್ (62), ಎಂಬವರು ತನ್ನ ಪತ್ನಿಯೊಂದಿಗೆ ದಿನಾಂಕ 25/07/2024 ರಂದು ಪನ್ ವೆಲ್ ನಿಂದ ಹರಿಪಾದಕ್ಕೆ ರೈಲು ನಂಬ್ರ 16345 ರ S 2 ಕೋಚ್ ಸೀಟ್ ನಂ 11 ರಲ್ಲಿ ಪ್ರಯಾಣಿಸುತ್ತಿದ್ದ ಸಮಯ ದಿನಾಂಕ : 26/07/2024 ರಂದು ಬೆಳಿಗ್ಗೆ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣ ತಲುಪಿದ ಸಮಯ ಯಾರೋ ಕಳ್ಳರು 36 ಗ್ರಾಂ ತೂಕದ ಚಿನ್ನಾಭರಣ ಮತ್ತು Vivo ಸ್ಮಾರ್ಟ್ ಮೊಬೈಲ್ ಇದ್ದ ಅವರ ಪತ್ನಿಯ ಬ್ಯಾಗ್ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ:303(2) BNS ರಂತೆ ಪ್ರಕರಣ ದಾಖಲಾಗಿದೆ.