Spread the love
  • ಉಡುಪಿ: ದಿನಾಂಕ: 14-09-2024(ಹಾಯ್ ಉಡುಪಿ ನ್ಯೂಸ್) ಮುಂಬಯಿ ಪೊಲೀಸ್ ಎಂದು ಬೆದರಿಸಿ ವ್ಯಕ್ತಿಯೋರ್ವ ರಿಂದ  89 ಲಕ್ಷ ಹಣ ವರ್ಗಾವಣೆ ಮಾಡಿ ಕೊಂಡಿದ್ದಾರೆ ಎಂದು ವಂಚನೆಗೆ ಒಳಗಾದ ವ್ಯಕ್ತಿ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
  • ಉಡುಪಿ , ಸಿಟಿ ಬಸ್ ನಿಲ್ದಾಣದ ಬಳಿಯ ನಿವಾಸಿ ಸಂತೋಷ ಕುಮಾರ್ (45) ಎಂಬವರಿಗೆ ದಿನಾಂಕ:11.09.2024 ರಂದು ಮೊಬೈಲ್‌ ನಂಬ್ರ +918822309328 ರಿಂದ ಯಾರೋ ಅಪರಿಚಿತರು ಕರೆಮಾಡಿ Telecom Regulatory Authority of India ದಿಂದ ಕರೆ ಮಾಡುತ್ತಿದ್ದು, ನಿಮ್ಮ ಮೊಬೈಲ್ ನಂಬ್ರದಲ್ಲಿ ಇಲ್ಲೀಗಲ್‌ ಅಡ್ವಟೈಸ್‌ಮೆಂಟ್‌ ಹಾಗೂ ಹೆರಾಸಿಂಗ್‌ ಟೆಕ್ಸ್ಟ್‌ ಮೆಸೇಜಸ್‌ ಆಗಿದ್ದು, ನಿಮ್ಮ ಮೇಲೆ ಒಟ್ಟು 17 ಎಫ್‌.ಐ.ಆರ್‌ ಆಗಿದ್ದು, ಇನ್ನು 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್‌ ನಂಬ್ರ ಡಿಸ್‌ಕನೆಕ್ಟ್‌ ಮಾಡುತ್ತೇವೆ. ನಿಮ್ಮ ಮೇಲೆ ಆರೆಸ್ಟ್‌ ವಾರಂಟು ಆಗಿರುತ್ತದೆ ಎಂಬುದಾಗಿ ಬೆದರಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ನಂತರ ವಾಟ್ಸಪ್‌ ವಿಡಿಯೋ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್‌ ಅಧಿಕಾರಿ ಸಮವಸ್ತ್ರದಲ್ಲಿದ್ದು, ಇನ್ಸ್‌ಪೆಕ್ಟರ್‌ ಸೈಬರ್‌ ಅಂದೇರಿ ಈಸ್ಟ್‌ ಮುಂಬಾಯಿ ಎಂದು ಹೇಳಿ ಬೆದರಿಸಿ ಕೇಸು ಆಗಿರುವ ಬಗ್ಗೆ ಹಾಗೂ ಸಂತೋಷ ಕುಮಾರ್ ರವರ ಆಧಾರ್‌ ಕಾರ್ಡ್‌ ಲಿಂಕಿನಲ್ಲಿರುವ ಬ್ಯಾಂಕ್‌ ಅಕೌಂಟ್‌ ನರೇಶ್‌ ಗೋಯೆಲ್‌ ಎಂಬಾತನ ಮನಿ ಲಾಂಡ್ರಿಂಗ್‌ ಕೇಸ್‌ನಲ್ಲಿ ಅಕೌಂಟ್‌ ಇನ್‌ವಾಲ್‌ಮೆಂಟ್‌ ಇದೆ ಎಂದು ತಿಳಿಸಿ ಆದಾಯದ ಮೂಲ ಚೆಕ್‌ ಮಾಡುವುದಾಗಿ ತಿಳಿಸಿ ಸಂತೋಷ ಕುಮಾರ್ ರವರ ಬ್ಯಾಂಕ್‌ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದು ಆ ಹಣವನ್ನು ಆರ್‌ಬಿಐಯಿಂದ ಫಂಡ್‌ ವೆರಿಫೀಕೆಶನ್‌ ಮಾಡಲು  State Bank of India ಕ್ಕೆ ಜಮಾ ಮಾಡಲು ಹೇಳಿ CIVIL LINES BRANCH NAGPUR ಅಕೌಂಟ್‌ ನಂಬ್ರ 43280321955, IFSC SBIN0011519 ವನ್ನು ಕೊಟ್ಟಿದ್ದು, ಹಣದ ಬಗ್ಗೆ ಕ್ಲೀಯರ್‌ ಆಗುವವರೆಗೆ ನಿಮ್ಮನ್ನು ವರ್ಚುವಲ್‌ ಆರೆಸ್ಟ್‌ ಮಾಡುವುದಾಗಿ ತಿಳಿಸಿರುತ್ತಾರೆ ಎಂದು ದೂರಿದ್ದಾರೆ.
  • ಅದರಂತೆ ಸಂತೋಷ್ ಕುಮಾರ್ ರವರು ದಿನಾಂಕ:12/09/2024 ರಂದು ರೂ.89,00,000/- ಹಣವನ್ನು ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. Telecom Regulatory Authority of India ಹಾಗೂ ಪೊಲೀಸ್‌ ಅಧಿಕಾರಿಯವರು ಎಂದು ನಂಬಿಸಿ ಡಿಜಿಟಲ್‌ ಆರೆಸ್ಟ್‌ ಮಾಡಿರುವುದಾಗಿ ಬೆದರಿಸಿ ಸಂತೋಷ್ ಕುಮಾರ್ ರಿಂದ ಹಣ ವರ್ಗಾವಣೆ ಮಾಡಿಕೊಂಡು ನಷ್ಟ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಈ ಬಗ್ಗೆ ಸೆನ್‌ ಪೊಲೀಸ್ ಠಾಣೆಯಲ್ಲಿ  ಕಲಂ: 66 (ಸಿ), 66 (ಡಿ)   ಐ.ಟಿ. ಆಕ್ಟ್. ಮತ್ತು 318(4), 308(6) BNS ನಂತೆ ಪ್ರಕರಣ ದಾಖಲಾಗಿದೆ.
error: No Copying!