ಪಡುಬಿದ್ರಿ: ದಿನಾಂಕ:21-08-2024 (ಹಾಯ್ ಉಡುಪಿ ನ್ಯೂಸ್) ಗಂಡ ಹಾಗೂ ಅತ್ತೆ ತನ್ನನ್ನು ಮನೆಗೆ ಸೇರಿಸಿ ಕೊಳ್ಳದೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳ ,ಇನ್ನಾ ಗ್ರಾಮದ ನಿವಾಸಿ ಶ್ರೀಮತಿ ವಿಜೇತಾ ಎಂಬವರು ಗುರು ಹಿರಿಯರ ಸಮ್ಮುಖದಲ್ಲಿ ಉಡುಪಿ ನಗರದ ನಿವಾಸಿ ಲತೀಶ್ ಎಂಬವರನ್ನು ಮದುವೆಯಾದ ನಂತರ ಗಂಡ ಲತೀಶನು ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿ ಆತನ ಮನೆಗೆ ಕರೆದುಕೊಂಡು ಹೋಗದೆ ಇದ್ದು, ನಂತರ 2024 ನೇ ಜೂನ್ ತಿಂಗಳ 1 ನೇ ತಾರೀಕಿನಂದು ಶ್ರೀಮತಿ ವಿಜೇತಾರವರು ಗಂಡನ ಮನೆಯಾದ ಉಡುಪಿ ತಾಲೂಕು ಕಾಡಬೆಟ್ಟು ಪುಳಿಮಾರು ಜಂಕ್ಷನ್ ಬಳಿ ಇರುವ ಜನಕಾ ಅಪಾರ್ಟ್‌ಮೆಂಟ್‌ಗೆ ಹೋಗಿ ಅಲ್ಲಿ ಒಂದು ತಿಂಗಳು ಇದ್ದ ಸಮಯದಲ್ಲಿ ದಿನಾಂಕ: 19/06/2024 ರಂದು ರಾತ್ರಿ ಸುಮಾರು 12:00 ಗಂಟೆಗೆ ಆರೋಪಿ ಲತೀಶ್‌ನು ರಾತ್ರಿ ವೇಳೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಹೊಡೆದಿದ್ದು, ನಂತರ ಅದೇ ರೀತಿ ಎರಡು ಮೂರು ಬಾರಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಹೊಡೆದಿದ್ದು, ನಂತರ ಆ ಬಗ್ಗೆ ಉಡುಪಿ ಮಹಿಳಾ ಠಾಣೆಗೆ ಹಾಗೂ ಪೊಲೀಸ್ ಮೇಲಾಧಿಕಾರಿಯವರಿಗೆ ಶ್ರೀಮತಿ ವಿಜೇತಾ ರವರು ದೂರನ್ನು ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ವಿಚಾರಣೆ ಸಮಯ ಆರೋಪಿಗಳು ಶ್ರೀಮತಿ ವಿಜೇತಾ ರವರನ್ನು ಮುಂದಕ್ಕೆ ಒಳ್ಳೆಯ ರೀತಿಯಿಂದ ನೋಡಿಕೊಳ್ಳುವುದಾಗಿ ಒಪ್ಪಿದ್ದು, ಆದರೂ ಕೂಡಾ ಶ್ರೀಮತಿ ವಿಜೇತಾ ರವರನ್ನು ಆರೋಪಿಗಳು ಅವರ ಮನೆಗೆ ಕರೆದುಕೊಂಡು ಹೋಗಿರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ: 19.08.2024 ರಂದು ಸಂಜೆ ಶ್ರೀಮತಿ ವಿಜೇತಾ ರವರು ವಾಪಾಸು ಗಂಡನ ಮನೆಗೆ ಹೋಗಿದ್ದು, ಆ ಸಮಯದಲ್ಲಿ ಶ್ರೀಮತಿ ವಿಜೇತಾರಿಗೆ ಆರೋಪಿ ಲತೇಶನು ತನ್ನ ಮೇಲೆ ಪೊಲೀಸ್ ದೂರು ನೀಡುತ್ತೀಯಾ ಎಂದು ಹೇಳಿ ಕೈಯಿಂದ ಹೊಡೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಆರೋಪಿ ಲತೇಶ್ ಹಾಗೂ ಆತನ ತಾಯಿ ಲಕ್ಷ್ಮಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಶ್ರೀಮತಿ ವಿಜೇತಾ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 85, 115(2), 352 BNS ನಂತೆ ಪ್ರಕರಣ ದಾಖಲಾಗಿದೆ.