ಬೈಂದೂರು: ದಿನಾಂಕ: 21-08-2024(ಹಾಯ್ ಉಡುಪಿ ನ್ಯೂಸ್) ಬಂಕೇಶ್ವರ ರೈಲ್ವೇ ಗೇಟ್ ಸಮೀಪದ ಅಂಗಡಿಯೊಂದರಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದವನನ್ನು ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ತಿಮ್ಮೇಶ್ ಬಿ ಎನ್ ರವರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ತಿಮ್ಮೇಶ್ ಬಿ ಎನ್ ರವರಿಗೆ ದಿನಾಂಕ:18-08-2024 ರಂದು ಬೈಂದೂರು ಗ್ರಾಮದ ಬಂಕೇಶ್ವರ ರೈಲ್ವೇ ಗೇಟ್ ಸಮೀಪದಲ್ಲಿರುವ ಹೇಮರಾಜ್ ಎಂಬವರ ಅಂಗಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಹೇಮರಾಜ್ ಎಂಬವರು ಅವರ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ಮಾಹಿತಿ ಬಂದಿದೆ ಎನ್ನಲಾಗಿದೆ.
ಕೂಡಲೇ ಪಿಎಸ್ಐ ರವರು ಬಂಕೇಶ್ವರ ರೈಲ್ವೇ ಗೇಟ್ ಸಮೀಪದಲ್ಲಿರುವ ಹೇಮರಾಜ್ ರವರ ಅಂಗಡಿಗೆ ಸಿಬ್ಬಂದಿ ಯವರೊಂದಿಗೆ ದಾಳಿ ನಡೆಸಿದಾಗ ಹೇಮರಾಜ್ ತನ್ನ ಅಂಗಡಿಯ ಹೊರಗಡೆ ನಿಂತು ಕೈಯಲ್ಲಿ ಚೀಟಿಯನ್ನು ಹಿಡಿದುಕೊಂಡು 10 ರೂಪಾಯಿಗೆ 700 ರೂಪಾಯಿ ಎಂದು ಜೋರಾಗಿ ಹೇಳುತ್ತಾ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದು ಪೊಲೀಸ್ ಜೀಪನ್ನು ಕಂಡು ಅಲ್ಲಿ ಸೇರಿದ ಸಾರ್ವಜನಿಕರು ಅಲ್ಲಿಂದ ಚದುರಿ ಓಡಿ ಹೋಗಿದ್ದು ಮಟ್ಕಾ ಜುಗಾರಿ ನಡೆಸುತ್ತಿದ್ದ ಅಂಗಡಿಯಾತನನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ಆತ ತನ್ನ ಹೆಸರು ಹೇಮರಾಜ್ (45) ತಗ್ಗರ್ಸೆ ಬೈಂದೂರು ಎಂದು ತಿಳಿಸಿ,ತಾನು ಮಟ್ಕಾ ಚೀಟಿ ವ್ಯವಹಾರಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಆತನ ಕೈಯಲ್ಲಿದ್ದ ಮಟ್ಕಾ ಚೀಟಿ-01, ಬಾಲ್ ಪೆನ್ -1ನ್ನು ಹಾಗೂ ಆತ ಸಂಗ್ರಹಿಸಿದ ರೂ 1070/- ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ತಿಮ್ಮೇಶ್ ಬಿ ಎನ್ ರವರು ಕಲಂ. 78 (i) (iii) KP ACT ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.