ಉಡುಪಿ: ದಿನಾಂಕ: 18-08-2024 (ಹಾಯ್ ಉಡುಪಿ ನ್ಯೂಸ್) ನಗರದ ಕಾಡಬೆಟ್ಟು ಎಲ್ಐಸಿ ಕಾಲೋನಿಯ ಮನೆಯೊಂದಕ್ಕೆ ರಾತ್ರಿ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ಕದ್ದಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಾಡಬೆಟ್ಟು ಎಲ್.ಐ.ಸಿ ಕಾಲೋನಿ ಎಂಬಲ್ಲಿ ವಾಸವಾಗಿರುವ ಪ್ರಶಾಂತ್ ಎಂಬವರು ಕೆಲಸದ ನಿಮಿತ್ತ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಇದ್ದಾರೆ ಎನ್ನಲಾಗಿದ್ದು ಆಗಾಗ ಕಾಡಬೆಟ್ಟು ಮನೆಗೆ ಬಂದು ಹೋಗುವುದು ಮಾಡುತ್ತಿರುತ್ತಾರೆ ಎಂದು ನರಸಿಂಹ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ: 18/08/2024 ರಂದು ಪ್ರಶಾಂತ್ ರವರು ಊರಿನಲ್ಲಿ ಇಲ್ಲದಿದ್ದಾಗ ಅವರ ಕಾಡಬೆಟ್ಟುವಿನ ಮನೆಗೆ ಯಾರೋ ಕಳ್ಳರು ಮನೆಯ ಮುಖ್ಯ ಬಾಗಿಲನ್ನು ಯಾವುದೋ ಸಾಧನದಿಂದ ಹೊಡೆದು ಮುರಿದು ಮನೆಯ ಒಳಗೆ ಪ್ರವೇಶಿಸಿ ಕಳ್ಳತನ ನಡೆಸಿದ್ದು, ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಕಳವಾಗಿದ್ದು, ಈ ಬಗ್ಗೆ ಪ್ರಶಾಂತ್ ಅವರು ಬೆಂಗಳೂರಿನಿಂದ ಬಂದಾಗ ಪರಿಶೀಲಿಸಿ ನಂತರ ದೂರು ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದೀಗ ಅವರ ಸಂಬಂಧಿಕರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 331(3), 331 (4) , 305, 62 BNS ರಂತೆ ಪ್ರಕರಣ ದಾಖಲಾಗಿದೆ.