Spread the love

ಶಂಕರನಾರಾಯಣ: ದಿನಾಂಕ:18-08-2024(ಹಾಯ್ ಉಡುಪಿ ನ್ಯೂಸ್) ಅಂಟಿರುವ ಗ್ರಾಮದ ಸರಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐವರನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆಯ ಪಿಎಸ್ಐ ಯವರಾದ ನಾಸಿರ್ ಹುಸೇನ್ ಅವರಿಗೆ ದಿನಾಂಕ: 15/08/2024 ರಂದು ಅಂಪಾರು ನಾಗಶ್ರೀ ಬಾರ್ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸರಕಾರಿ ಹಾಡಿಯಲ್ಲಿ ಅಕ್ರಮವಾಗಿ ಗುಂಪುಗೂಡಿಕೊಂಡು ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಎಂಬ ಹೆಸರಿನ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಆ ಕೂಡಲೇ ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 1)ವಿಜಯಕರ ( 48) ಅಂಪಾರು ಗ್ರಾಮ 2) ಮಂಜುನಾಥ ( 48) ಶಂಕರನಾರಾಯಣ ಗ್ರಾಮ 3) ಉಮೇಶ (39) ಅಂಪಾರು ಗ್ರಾಮ 4).ಸಂತೋಷ (45) ಅಂಪಾರು ಗ್ರಾಮ, 5) ರಮೇಶ (48) ಅಂಪಾರು ಗ್ರಾಮ ಎಂಬವರನ್ನು  ಬಂಧಿಸಿದ್ದಾರೆ.

ಆಪಾದಿತರು ಇಸ್ಪೀಟ್ ಜುಗಾರಿ ಆಟಕ್ಕೆ ಉಪಯೋಗ ಮಾಡಿದ ನಗದು ಹಣ 2720/- ರೂ ಹಾಗೂ ನೆಲದ ಮೇಲೆ ಬಿದ್ದಿದ್ದ ಇಸ್ಪಿಟ್ ಎಲೆಗಳು ಸೇರಿ ಒಟ್ಟು 52 ಇಸ್ಫೀಟ್ ಎಲೆಗಳನ್ನು ಹಾಗೂ ರಟ್ಟಿನ ಬಾಕ್ಸನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2024 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

error: No Copying!