Spread the love

ಮಣಿಪಾಲ: ದಿನಾಂಕ:18-08-2024(ಹಾಯ್ ಉಡುಪಿ ನ್ಯೂಸ್) ಪ್ರತಿಭಟನೆಯಲ್ಲಿ ನಿರತನಾಗಿದ್ದ ವ್ಯಕ್ತಿಯೋರ್ವನು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೋರ್ವರಿಗೆ ಅವಮಾನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ಅವರು  ದಿನಾಂಕ:05.08.2024 ರಂದು ಬೆಳಿಗ್ಗೆ  ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ಪ್ರತಿಭಟನಾ ವೃತ್ತದಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ನ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಮಯದಲ್ಲಿ  ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನವೀನ ನಾಯಕ್‌ ಎಂಬುವವನು  ಕರ್ತವ್ಯ ನಿರ್ವಹಿಸುತ್ತಿದ್ದ ವ್ರತ್ತ ನಿರೀಕ್ಷಕರಿಗೆ ಏಕವಚನದಲ್ಲಿ ಬೈದು ಅವಮಾನ ಮಾಡಿ ಪೊಲೀಸ್ ಇಲಾಖೆ ಯ ಸಾರ್ವಜನಿಕ ಸೇವಕ ಎಂದು ತಿಳಿದು ಕೂಡಾ, ಕಾನೂನು ಸಮ್ಮತವಾಗಿ ಕರ್ತವ್ಯ ಮಾಡುವುದನ್ನು ವಿಳಂಭಗೊಳಿಸಲು ಹಾಗೂ ತೊಂದರೆ ನೀಡಲು ಹಾಗೂ ವ್ರತ್ತ ನಿರೀಕ್ಷಕರು ಕರ್ತವ್ಯವನ್ನು ನಿರ್ವಹಿಸಲು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಲ್ಲದೆ, ಅವರ ಮನಸ್ಸಿಗೆ ಘಾಸಿಯಾಗುವ ರೀತಿಯಲ್ಲಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಎಂದು ದೂರಿದ್ದಾರೆ.

ಈ ಬಗ್ಗೆ ಮಣಿಪಾಲ  ಪೊಲೀಸ್‌ ಠಾಣೆಯಲ್ಲಿ  ಕಲಂ 224 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.

error: No Copying!