ಅಜೆಕಾರು: ದಿನಾಂಕ : 09-08-2024(ಹಾಯ್ ಉಡುಪಿ ನ್ಯೂಸ್) ದೊಂಡೇರಂಗಡಿ ಪೇಟೆಯಲ್ಲಿ ಸಾರ್ವಜನಿಕ ಶಾಂತಿ ಭಂಗ ನಡೆಸಿದವರ ಮೇಲೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಗಣೇಶ್ ಅವರು ದಿನಾಂಕ 08.08.2024 ರಂದು ಹಗಲು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಕ್ಕುಜೆ ಗ್ರಾಮದ ದೊಂಡೆರಂಗಡಿ ಪೇಟೆಯಲ್ಲಿ ಸಂಚರಿಸುತ್ತ ಇರುವಾಗ ಅಲ್ಲಿನ ಅಟೋರಿಕ್ಷಾ ನಿಲ್ದಾಣದ ಬಳಿಯಲ್ಲಿ, ಆರೋಪಿತರುಗಳಾದ ನಿತ್ಯಾನಂದ (33) ಕಡ್ತಲ ಗ್ರಾಮ ಉಡುಪಿ ತಾಲೂಕು ರೋಪೇಶ್ ಕುಮಾರ್(28) ಕುಕ್ಕುಜೆ ಗ್ರಾಮ,ಉದಯ (33), ಎಳ್ಳಾರೆ ಗ್ರಾಮ, ದೀಕ್ಷಿತ್ (25), ಕಕ್ಕುಂಜೆ ಗ್ರಾಮ, ಅಂಕಿತ್ (27), ಕಡ್ತಲ ಗ್ರಾಮ, ರವೀಂದ್ರ (38), ಕುಕ್ಕುಜೆ ಗ್ರಾಮ ಎಂಬವರುಗಳು ಹಲವು ಜನರು ಅಕ್ರಮ ಕೂಟ ಸೇರಿ, ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳುತ್ತ, ದೊಂಬಿ ನಡೆಸಿ ಸಾರ್ವಜನಿಕ ಶಾಂತಿಭಂಗವುಂಟು ಮಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಸಮೀಪಕ್ಕೆ ಹೋಗಿ ಅವರಿಗೆ ತಿಳುವಳಿಕೆ ನೀಡಿ, ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಕೂಟ ಸೇರದಂತೆ ಹಾಗೂ ಶಾಂತಿ ಭಂಗವುಂಟು ಮಾಡದಂತೆ ತಿಳುವಳಿಕೆ ನೀಡಿದರೂ, ಅಲ್ಲಿ ಸೇರಿದ ಜನರು ಅವರ ಕೃತ್ಯವನ್ನು ಮುಂದುವರಿಸಿರುತ್ತಾರೆ ಎನ್ನಲಾಗಿದೆ . ಗಲಾಟೆಯ ಬಗ್ಗೆ ವಿಚಾರಿಸಿದಾಗ ಅವರು ಮೊಬೈಲ್‌ನಲ್ಲಿ ವಾಟ್ಸಾಪ್‌ನಲ್ಲಿ ಸ್ಟೇಟಸ್‌ಹಾಕಿದ ವಿಚಾರದಲ್ಲಿ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿರುವುದಾಗಿ ತಿಳಿದುಬಂದಿರುತ್ತದೆ ಎನ್ನಲಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಕಲಂ : 189(2),191(2), 194(2),190 BNS -2023 ರಂತೆ ಪ್ರಕರಣ ದಾಖಲಾಗಿದೆ.