- ಉಡುಪಿ: ದಿನಾಂಕ 08/08/2024( ಹಾಯ್ ಉಡುಪಿ ನ್ಯೂಸ್) ಅಂಬಲಪಾಡಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದಲ್ಲಿಗೇ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭರತೇಶ ಕಂಕಣವಾಡಿ ಅವರು ದಾಳಿ ನಡೆಸಿದ್ದಾರೆ.
- ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ -2) ಭರತೇಶ ಕಂಕಣವಾಡಿ ಅವರಿಗೆ ದಿನಾಂಕ: 07-08-2024 ರಂದು ಅಂಬಲಪಾಡಿ ಗ್ರಾಮದ ಅಂಬಲಪಾಡಿ ದೇವಸ್ಥಾನದ ಕ್ರಾಸ್ ನ ರಿಕ್ಷಾ ನಿಲ್ದಾಣದ ಬಳಿಯ ಖಾಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿ ಬಾಳ್ ಅನ್ನು ಕಟ್ಟಿ ಒಂದಕ್ಕೊಂದು ತಿವಿದುಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿದ್ದಾರೆ ಎಂಬುದಾಗಿ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದಾಗ ಕೋಳಿ ಅಂಕ ಆಟ ಆಡಿಸುತ್ತಿದ್ದ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ ಎನ್ನಲಾಗಿದೆ.
- ಪೊಲೀಸರು ಸ್ಥಳವನ್ನು ಪರಿಶೀಲಿಸಿದಾಗ 12 ಕೋಳಿಗಳು ಮತ್ತು ಆಟಕ್ಕೆ ಬಳಿಸಿದ ಹಣ 380/- ಮತ್ತು ಕೋಳಿಬಾಳ್‌ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP act & 11(1) (N) Animal cruelty act ರಂತೆ ಪ್ರಕರಣ ದಾಖಲಾಗಿದೆ.