Spread the love

ಉಡುಪಿ: ದಿನಾಂಕ:05-08-2024( ಹಾಯ್ ಉಡುಪಿ ನ್ಯೂಸ್) ಕುಂಜಿಬೆಟ್ಟು ಪರಿಸರದ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ನಿವಾಸಿ ಅಶ್ರಫ್ ಮೊಹಮ್ಮದ್ (52) ಎಂಬವರು ಮನೆಯಲ್ಲಿ ಇಲ್ಲದ ಸಮಯ ದಿನಾಂಕ:03/08/2024 ರಂದು  ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿ ಅಶ್ರಫ್ ಮೊಹಮ್ಮದ್ ಅವರ ತಂಗಿ ನಸ್ರೀನ್‌ ರವರ ಚಿನ್ನದ ಬಳೆ ಅಂದಾಜು 3 ಪವನ್‌ ಹಾಗೂ ಮನೆಯಲ್ಲಿದ್ದ ಹಳೆಯ ಲ್ಯಾಪ್‌ಟಾಪ್‌ ಮತ್ತು ಹಳೆಯ ಟ್ಯಾಬ್‌ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ವಸ್ತುಗಳ ಮೌಲ್ಯ ಒಟ್ಟಾರೆಯಾಗಿ 1,00,000/-ರೂಪಾಯಿ ಆಗಬಹುದು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 331(3),331(4),305 BNS ರಂತೆ ಪ್ರಕರಣ ದಾಖಲಾಗಿದೆ.

error: No Copying!