ಮಣಿಪಾಲ: ದಿನಾಂಕ: 03.08.2024 (ಹಾಯ್ ಉಡುಪಿ ನ್ಯೂಸ್) ಶಾಂತಿನಗರದ ಲಾಡ್ಜಿಂಗ್ ಒಂದಕ್ಕೆ ದಾಳಿ ನಡೆಸಿದ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದೇವರಾಜ್ ಟಿವಿ ಅವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದೇವರಾಜ್ ಅವರು ದಿನಾಂಕ :03-08-2024 ರಂದು ಠಾಣೆಯಲ್ಲಿ ಕರ್ತವ್ಯ ದಲ್ಲಿರುವಾಗ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಶಾಂತಿ ನಗರ ಸಮೃದ್ಧಿ ಬೋರ್ಡಿಂಗ್ ಎಂಡ್ ಲಾಡ್ಜಿಂಗ್ ನಲ್ಲಿ ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಮಹಿಳೆಯರನ್ನು ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದಾರರಿಂದ ಖಚಿತ ಮಾಹಿತಿ ಬಂದಿದೆ ಎನ್ನಲಾಗಿದೆ.
ಮಾಹಿತಿ ಬಂದೊಡನೆ ಪೊಲೀಸ್ ನಿರೀಕ್ಷಕರು ಮಾನ್ಯ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ತಿಳಿಸಿ ಧಾಳಿ ಮಾಡಲು ಅನುಮತಿ ಪಡೆದುಕೊಂಡಿದು ಮಾಹಿತಿ ಬಂದ ಲಾಡ್ಜಿಂಗ್ ಗೆ ದಾಳಿ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಕಲಂ: ಕಲಂ 3,4,5,6 ITP Act And 143 BNS ರಂತೆ ಪ್ರಕರಣ ದಾಖಲಾಗಿದೆ.