ಕುಂದಾಪುರ: ದಿನಾಂಕ: 02-08-2024(ಹಾಯ್ ಉಡುಪಿ ನ್ಯೂಸ್ )
ಕುಂದಾಪುರ ನಿವಾಸಿ ವಿಶಾಲ (32) ಎಂಬವರು ಸಪ್ತಸ್ವರ ವಿವಿದೋದ್ದೇಶ ಸಹಕಾರ ಸಂಘ ನಿ, ತಲ್ಲೂರು ಸಂಸ್ಥೆಯಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಯೋರ್ವರು ಸಂಸ್ಥೆಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಸ್ಥೆಯಲ್ಲಿ 2016 ನೇ ಸಾಲಿನಿಂದ 2022 ರ ಸಾಲಿನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಆಪಾದಿತ ರವಿ ಎಂಬವರ ಕರ್ತವ್ಯದ ಅವಧಿಯಲ್ಲಿ ಸಂಘದ ಸದಸ್ಯರ ಬೇರೆ ಬೇರೆ ಖಾತೆಗಳಿಂದ ಸಂಘದ ಸ್ವರಸಿಂಚನ ಖಾತೆಗೆ ಬಂದ ಹಣ 6,37,428/- ರೂಪಾಯಿಯನ್ನು ಸಂಘದ ಖಾತೆಗೆ ಜಮಾ ಮಾಡದೇ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ ಹಲವಾರು ರೀತಿಯಲ್ಲಿ ಸಂಸ್ಥೆಗೆ ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ಸಂಘದ ದಾಖಲೆಗಳನ್ನು ಅನಧಿಕೃತವಾಗಿ ತಿದ್ದಿ ಆಪಾದಿತ ರವಿಯು ತನ್ನ ಲಾಭಕ್ಕಾಗಿ ಒಟ್ಟು 23,62,793.99/ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡು ಸಂಘಕ್ಕೆ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2024 ಕಲಂ: 409, 418, 465, 466, 468, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.