Spread the love

ಉಡುಪಿ: ದಿನಾಂಕ:26-07-2024(ಹಾಯ್ ಉಡುಪಿ ನ್ಯೂಸ್) ವ್ಯವಹಾರ ನಿಮಿತ್ತ ಪಡೆದಿದ್ದ ಸಾಲದ ಹಣ ವಾಪಾಸ್ ಕೇಳಿದ್ದಕ್ಕೆ ರಾಜೇಶ್ ಪಿಂಟೋ ಎಂಬವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಲ್ಸನ್ ಸಿಕ್ವೇರಾ ಎಂಬವರು ದೂರು ನೀಡಿದ್ದಾರೆ.

ಉಡುಪಿ, ಅಜ್ಜರಕಾಡು ನಿವಾಸಿ ವಿಲ್ಸನ್‌ ಸೀಕ್ವೇರಾ (56) ಎಂಬವರಿಗೆ ಆರೋಪಿ ರಾಜೇಶ್‌ ಪಿಂಟೋ ಎಂಬವರು ಪರಿಚಯಸ್ಥರಾಗಿದ್ದು, ಸುಮಾರು 1 ½ ವರ್ಷದಿಂದ  ವಿಲ್ಸನ್ ಸಿಕ್ವೇರಾ ರವರು ಆರೋಪಿ ರಾಜೇಶ್ ಪಿಂಟೋ ರವರಿಗೆ ಕ್ಯಾಟರಿಂಗ್‌ ವ್ಯವಹಾರವಹಿಸಿಕೊಡುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ರಾಜೇಶ್ ಪಿಂಟೋನು ವಿಲ್ಸನ್ ಸಿಕ್ವೇರಾ ರವರಿಗೆ ಕಮೀಷನ್‌ ಕೊಡುವುದಾಗಿ ತಿಳಿಸಿ ವಿಲ್ಸನ್ ಸಿಕ್ವೇರಾ ರವರಿಂದ ಕೈಸಾಲ ಮತ್ತು ಬ್ಯಾಂಕ್‌ ಸಾಲ ಮಾಡಿ ಹಣವನ್ನು ಪಡೆದುಕೊಂಡು ಕೊಟ್ಟ ಮಾತಿನಂತೆ ಕಮೀಷನ್‌ ಮತ್ತು ಸಾಲದ ಹಣವನ್ನು ವಾಪಾಸ್ಸು ಕೊಟ್ಟಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ

ಈ ಬಗ್ಗೆ ಆರೋಪಿ ರಾಜೇಶ್ ಪಿಂಟೋನು ವಿಲ್ಸನ್ ಸಿಕ್ವೇರಾ ರವರಿಗೆ ಚೆಕ್‌ಗಳನ್ನು ಸಹಿ ಮಾಡಿ ನೀಡಿದ್ದು. ಆ ಚೆಕ್‌ಗಳನ್ನು ವಿಲ್ಸನ್ ಸಿಕ್ವೇರಾ ರವರು ನಗದೀಕರಣಕ್ಕಾಗಿ ಬ್ಯಾಂಕಿಗೆ ಸಲ್ಲಿಸಿದಾಗ ಚೆಕ್‌ಗಳು ನಗದೀಕರಣಗೊಳ್ಳದೇ ವಾಪಾಸ್ಸು ಬಂದಿದ್ದು  ವಿಲ್ಸನ್ ಸಿಕ್ವೇರಾರವರು ಆರೋಪಿ ರಾಜೇಶ್ ಪಿಂಟೋನ ಬಳಿ ಹಣ ಕೇಳಿದಾಗ ಆರೋಪಿ  ರಾಜೇಶ್ ಪಿಂಟೋನು ವಿಲ್ಸನ್ ಸಿಕ್ವೇರಾ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಇನ್ನೂ ಮುಂದಕ್ಕೆ ಹಣದ ವಿಚಾರಕ್ಕೆ ಬಂದಲ್ಲಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾನೆ ಎಂದು ವಿಲ್ಸನ್ ಸಿಕ್ವೇರಾ ನ್ಯಾಯಾಲಯದಲ್ಲಿ ನೀಡಿರುವ ಖಾಸಗಿ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ  ಕಲಂ 406, 420,504,506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!