ಮಲ್ಪೆ: ದಿನಾಂಕ:14-07-2024(ಹಾಯ್ ಉಡುಪಿ ನ್ಯೂಸ್) ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರೋರ್ವರಿಗೆ ಇತರ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.
ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ರವಿರಾಜ್ (38) ಅವರು ದಿನಾಂಕ 12/07/2024 ರಂದು ತೆಂಕನಿಡಿಯೂರು ಪಂಚಾಯತ್ ನ ಸಾಮಾನ್ಯ ಸಭೆಗೆ ಬಂದಿದ್ದು ಸಭೆಯಲ್ಲಿ ವಿಷಯಕ್ಕೆ ಸಂಬಂದಿಸಿದ ಚರ್ಚೆ ನಡೆಯವ ಮೊದಲೆ ಸಭೆಗೆ ಬಂದಿದ್ದ ಪಂಚಾಯತ್ ಸದಸ್ಯರಾದ ವಿನೋದ , ಮಾಲಿನಿ, ರೇಖಾ, ಪ್ರಶಾಂತ್ , ನಿರ್ಮಲ, ಸತೀಶ್ ,ಗೀತಾ , ಅರುಣ್ , ಪ್ರದೀಪ ರವರು ಸಾಮಾನ್ಯ ಸಭೆಯ ನೊಟೀಸ್ ಪಡೆದು , ಸಾಮಾನ್ಯ ಸಭೆ ನಿಲ್ಲಿಸುವಂತೆ ಆರೋಪಿಗಳು ರವಿರಾಜ್ ಅವರ ಮೇಲೆ ಹಲ್ಲೆಗೆ ಮುಂದಾದಾಗ ರವಿರಾಜ್ ರವರು ತಡೆಯಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ಕೈಯಿಂದ ಹೊಡೆದು ದೂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ. 115(2), 189(2) ,190, 191(2), 351(2), 352 BNS AND 3(1)(r)̧ 3(1)(ş)3(2)(v-a) SCST ACT ರಂತೆ ಪ್ರಕರಣ ದಾಖಲಾಗಿದೆ.