ದಿನಾಂಕ:13-07-2024 (ಹಾಯ್ ಉಡುಪಿ ನ್ಯೂಸ್)
ಕರ್ನಾಟಕ ರಾಜ್ಯದ ನೂತನ ಉಪ ಲೋಕಾಯುಕ್ತರಾಗಿ ಇತ್ತೀಚೆಗೆ ನೇಮಕಗೊಂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ಇವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗವು ಅವರಿಗೆ ಪುಷ್ಪಗುಚ್ಛ ನೀಡಿ ಅಭಿನoದಿಸಿತು.
ನೂತನ ಉಪ ಲೋಕಾಯುಕ್ತರನ್ನು ಉಡುಪಿಗೆ ಆಹ್ವಾನಿಸಿದ ನಿಯೋಗವು, ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿ ಹಾಗೂ ನೌಕರ ವರ್ಗದಲ್ಲಿ ಚುರುಕು ಮೂಡಿಸಿ, ಜನ ಸಾಮಾನ್ಯರಿಗೆ ಸರಕಾರಿ ಸೇವೆಗಳು ಶೀಘ್ರ ದೊರಕುವಂತೆ ಮಾಡಬೇಕೆಂದು ಮನವಿ ಮಾಡಿತು. ನಿಯೋಗದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಮೂಡುಬೆಳ್ಳೆ, ಜತೆ ಕಾರ್ಯದರ್ಶಿ ಶ್ರೀ ಬೈಲೂರು ರವೀಂದ್ರ ದೇವಾಡಿಗ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಆರೂರು ಸುಕೇಶ್ ಶೆಟ್ಟಿ ಮತ್ತು ವಕೀಲರ ಸಂಘದ ಸದಸ್ಯ ಶ್ರೀ ರಜನಿಕಾಂತ್ ಉಪಸ್ಥಿತರಿದ್ದರು.