Spread the love

ಉಡುಪಿ : ದಿನಾಂಕ: 26-06-2024(ಹಾಯ್ ಉಡುಪಿ ನ್ಯೂಸ್) ಸಂತೆಕಟ್ಟೆ ಕೆನರಾ ಬ್ಯಾಂಕ್ ನ ಎಟಿಎಂ ಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆಂಧು ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಬಿಲ್ಡಿಂಗ್ ನಲ್ಲಿರುವ ಕೆನರಾ ಬ್ಯಾಂಕ್‌ ನಲ್ಲಿ ಟೋನಿ ಟೈಟಸ್ ಎಂಬವರು ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಉಡುಪಿ ತಾಲ್ಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ನವಮಿ ಬೇಕರಿ ಬಳಿ ಇರುವ ಕೆನರಾ ಬ್ಯಾಂಕ್‌ ನ ಎಟಿಎಂ ಐಡಿ ನಂ N0144001 ನೇದರಲ್ಲಿ ದಿನಾಂಕ:26/06/2024 ರಂದು ಸಮಯ ಬೆಳಿಗ್ಗೆ 1:21 ಗಂಟೆಗೆ ಯಾರೋ ಕಳ್ಳರು ಯಾವುದೋ ಆಯುಧದಿಂದ ಎಟಿಎಂ ನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಎಟಿಎಂ ನಲ್ಲಿದ್ದ ಹಣವನ್ನು ದೋಚಲು ಪ್ರಯತ್ನಪಟ್ಟಿದ್ದು, ನಂತರ ಎಟಿಎಂ ನ OTC ಲಾಕ್‌ , ಸೆನ್ಸಾರ್‌ ನ್ನು ಹೊಡೆದುಹಾಕಿ ನಷ್ಟವನ್ನುಂಟು ಮಾಡಿರುತ್ತಾರೆ ಎಂದು ದೂರಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 457,380,511 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ..

error: No Copying!