Spread the love

ಉಡುಪಿ: ದಿನಾಂಕ :21-06-2024 (ಹಾಯ್ ಉಡುಪಿ ನ್ಯೂಸ್) ಅಪರಿಚಿತರು ವಾಟ್ಸ್ ಆ್ಯಪ್ ನಲ್ಲಿ  ಹೆಚ್ಚಿನ ಲಾಭಾಂಶ ದ ಆಸೆ ತೋರಿಸಿ ನಂಬಿಸಿ ವಂಚಿಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇದವ್ಯಾಸ (67) ಎಂಬವರಿಗೆ ದಿನಾಂಕ:01-04-2024 ರಂದು ಯಾರೋ ಅಪರಿಚಿತ ವ್ಯಕ್ತಿಗಳು Whats App ನಲ್ಲಿ ಹೂಡಿಕೆಯ ಬಗ್ಗೆ ಸಂದೇಶ ಕಳುಹಿಸಿದ್ದು ನಂತರದಲ್ಲಿ ಅಪರಿಚಿತರುಗಳು ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ವೇದವ್ಯಾಸ ರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ Eltas Fud ಎನ್ನುವ App ನ ಲಿಂಕ್‌ ಕಳುಹಿಸಿ ಡೌನ್‌ಲೋಡ್‌ ಮಾಡುವಂತೆ ತಿಳಿಸಿ App ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಂಬಿಸಿ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದು, ಇದನ್ನು ನಂಬಿದ ವೇದವ್ಯಾಸ ರು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ, ವೇದವ್ಯಾಸ ರು ಹೊಂದಿರುವ ಎಸ್.ಬಿ.ಐ, ಕೆನರಾ, ಕರ್ನಾಟಕ ಬ್ಯಾಂಕ್ ನ ಉಳಿತಾಯ ಖಾತೆಯಿಂದ ಹಾಗೂ ವೇದವ್ಯಾಸ ರ ಪತ್ನಿಯ ಐ.ಡಿ.ಬಿ.ಐ ಬ್ಯಾಂಕ್ ನ ಉಳಿತಾಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 23,73,891/-ಹಣವನ್ನು ಆನ್‌ಲೈನ್‌ಮುಖೇನಾ ಡಿಪಾಸಿಟ್ ಮಾಡಿಸಿಕೊಂಡಿದ್ದು ತದನಂತರ ವೇದವ್ಯಾಸರು ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ.

ಅವರು ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!