Spread the love

ಉಡುಪಿ: ದಿನಾಂಕ: 21-06-2024(ಹಾಯ್ ಉಡುಪಿ ನ್ಯೂಸ್) ನಗರದಲ್ಲಿ ಬಸ್ಸಿನ ಕಲೆಕ್ಷನ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿ ಯೋರ್ವರನ್ನು ಅಪಹರಿಸಿ ಹಣ ದೋಚಿರುವ ಪ್ರಕರಣ ನಡೆದಿದೆ.

ಉಡುಪಿ ಆತ್ರಾಡಿ ಗ್ರಾಮದ ನಿವಾಸಿ ಮಹಮ್ಮದ್ ನಿಹಾಲ್ (19)  ಎಂಬವರು ಬಸ್ಸಿನ ಕಲೆಕ್ಷನ್ ವ್ಯವಹಾರವನ್ನು ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 20/06/2024 ರಂದು ಬೆಳಿಗ್ಗೆ  AKMS ಬಸ್ಸಿನ ಕಲೆಕ್ಷನ್ ಹಣವನ್ನು ತೆಗೆದುಕೊಂಡು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ಮೂಕಾಂಬಿಕ ಬೇಕರಿ ಬಳಿ ಹೋಗುತ್ತಿರುವಾಗ ಮಾರುತಿ ರಿಡ್ಜ್ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು,  ಮಹಮ್ಮದ್ ನಿಹಾಲ್ ಗೆ ಚಾಕುವನ್ನು ತೋರಿಸಿ, ಕೈಯಿಂದ ಹೊಡೆದು ಅವಾಚ್ಯ ಶಬ್ಧಗಳಿಂದ ಬೈದು, ಮಹಮ್ಮದ್ ನಿಹಾಲ್ ರ ಬಳಿ ಇದ್ದ 1 ಲಕ್ಷ ರೂಪಾಯಿ ಹಣವನ್ನು ಬಲವಂತವಾಗಿ ಕಸಿದುಕೊಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರಿದ್ದಾರೆ.

ಆರೋಪಿ ಗಳು ಮಹಮ್ಮದ್ ನಿಹಾಲ್ ರಿಗೆ ನೋಡಿ ಪರಿಚಯವಿರುವ ಶಾರೀಕ್, ಇರ್ಫಾನ್ ಮತ್ತು ಉಳಿದ ಇತರೇ ಇಬ್ಬರು ಅಪರಿಚಿತ ವ್ಯಕ್ತಿಗಳಾಗಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ  ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 365,323,504,392,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!